ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕಾಂಗ್ರೆಸ್‌ಗೆ ಕ್ರೆಡಿಟ್ಸ್ ಕೊಟ್ಟ ಜಯಮಾಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ನೂತನ ಸಂಸತ್‌ನಲ್ಲಿ ಇಂದು ಮೊದಲ ಕಲಾಪ ನಡೆದಿದೆ. ಮಹಿಳಾ ಮೀಸಲಾತಿ ಮಂಡನೆ ಮಸೂದೆಯಾಗಿದ್ದು, ಇದರ ಕ್ರೆಡಿಟ್ಸ್‌ನ್ನು ಮಾಜಿ ಸಚಿವೆ ಜಯಮಾಲಾ ಕಾಂಗ್ರೆಸ್‌ಗೆ ನೀಡಿದ್ದಾರೆ.

ಮೂರು ದಶಕಗಳಿಂದ ಈ ದಿನಕ್ಕಾಗಿ ಕಾದಿದ್ದೇವೆ, ಇಂದಿರಾ ಗಾಂಧಿ ಅವರು ರಾಷ್ಟ್ರವನ್ನು ಆಳಿದ್ದಾರೆ, ಮಹಿಳೆಯರಿಗೆ ಇನ್ನಷ್ಟು ಅವಕಾಶ ಸಿಗುತ್ತಿರುವುದು ಖುಷಿ ವಿಷಯ. ಸೋನಿಯಾ ಹಾಗೂ ರಾಜೀವ್ ಗಾಂಧೀ ಅವರು ಕಷ್ಟಪಟ್ಟಿದ್ದರ ಫಲ ಇದೆ. ಎಲ್ಲೋ ಒಬ್ಬೊಬ್ಬರು ಹೆಣ್ಣುಮಕ್ಕಳು ಟಿಕೆಟ್ ಪಡೆಯಲು ಪ್ರಯತ್ನ ಮಾಡ್ತಾರೆ, ಆ ಹೆಣ್ಣನ್ನು ಸೋಲಿಸುವ ಎಲ್ಲಾ ಪ್ರಯತ್ನ ಕೂಡ ಮಾಡಲಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್, ಬಿಜೆಪಿ ಅಂತ ಹೇಳ್ತಿಲ್ಲ, ಆದ್ರೆ ಈ ಹಿಂದೆ ಕಾಂಗ್ರೆಸ್ ಮಾಡಲು ಹೊರಟಾಗ ಬಿಜೆಪಿ ಬೇಡ ಅಂದಿದ್ರು. ಅಂದು ವಿರೋಧಿಸಿದವರೇ ಇಂದು ಮಂಡನೆ ಮಾಡ್ತಿದ್ದಾರೆ ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!