ಜನವರಿ 10 ರಿಂದ ಸಾವರಿನ್ ಗೋಲ್ಡ್ ಬಾಂಡ್ ನಡಿ ಹೂಡಿಕೆಗೆ ಅವಕಾಶ

ಹೊಸದಿಗಂತ ವರದಿ, ತುಮಕೂರು:
ಅಂಚೆ ಕಚೇರಿ ತುಮಕೂರು ವಿಭಾಗವು 2021-22ನೇ ಸಾಲಿನ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಜನವರಿ 10 ರಿಂದ ಪ್ರಾರಂಭ ಮಾಡಲಿದ್ದು, ಈ ಯೋಜನೆಯಡಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದೆ.
ಈ ಯೋಜನೆಯಡಿ ಹೂಡಿಕೆ ಮಾಡಲು ಜ. 14 ರವರೆಗೆ ಅವಕಾಶವಿದ್ದು, ಕನಿಷ್ಟ 1 ಗ್ರಾಂ ಹೂಡಿಕೆ ಮಾಡಬೇಕು. ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ(1 ಆರ್ಥಿಕ ವರ್ಷದಲ್ಲಿ) ವರೆಗೆ ಗರಿಷ್ಠ ಹೂಡಿಕೆ ಮಾಡಲು ಅವಕಾಶವಿರುತ್ತದೆ.
ಈ ಬಾಂಡ್ ನ ಅವಧಿಯು 8 ವರ್ಷಗಳಾಗಿದ್ದು, ಅವಧಿ ಮುಗಿದ ಸಂದರ್ಭದಲ್ಲಿ ಚಿನ್ನದ ಮಾರುಕಟ್ಟೆ ದರದ ಮೊತ್ತವನ್ನು ನೀಡಲಾಗುವುದು ಹಾಗೂ ವಾರ್ಷಿಕ ಶೇ. 2.5 ರಷ್ಟು ನಿಶ್ಚಿತ ಬಡ್ಡಿ (ಅರ್ಧ ವಾರ್ಷಿಕ, ವರ್ಷಕ್ಕೆ 2 ಬಾರಿ) ಲಭ್ಯವಿರುತ್ತದೆ.
ಅಲ್ಲದೆ 5, 6 ಮತ್ತು 7ನೇ ವರ್ಷದಲ್ಲಿ ಯೋಜನೆಯಿಂದ ನಿರ್ಗಮಿಸುವ ಅವಕಾಶವಿದ್ದು, ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!