ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದ್ದು, ಇಂದು ಮೂರನೇ ದಿನವಾಗಿದೆ.
ಬೆಳಗ್ಗೆ ಒಂಬತ್ತರಿಂದಲೇ ಪಾದಯಾತ್ರೆ ಆರಂಭವಾಗಿದ್ದು, ಮಧ್ಯಾಹ್ನ ಒಂದು ಗಂಟೆಗೆ ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ಅಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿದ್ದು, ಅಲ್ಲಿ ಕೈ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಪಾದಯಾತ್ರೆಯಲ್ಲಿ ಯಾವುದೇ ಮಾತನಾಡೋದಿಲ್ಲ, ಮೌನವಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಆದರೆ ಇಂದು ಮಾತನಾಡಲೇಬೇಕು, ಸಂದೇಶ ಸಾರಲು ಇದು ಅವಕಾಶ ಎಂದು ಕೈ ನಾಯಕರು ಆಗ್ರಹಿಸಿದ್ದಾರೆ.
ಅನಾರೋಗ್ಯದಿಂದ ನಿನ್ನೆ ಗೈರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮತ್ತೆ ಪಾದಯಾತ್ರೆಗೆ ಸೇರಲಿದ್ದಾರೆ.
ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಹಾಕಲು 100 ಕೆ.ಜಿ. ಸೇಬಿನ ಹಾರ ಸಿದ್ಧವಾಗಿದೆ.