spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದೇ ಮೊದಲು ಮನುಷ್ಯನಿಗೆ ಹಂದಿ ಹೃದಯ ಕಸಿ: ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ ವೈದ್ಯರು

- Advertisement -Nitte

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸುವಂತೆ ಇದೇ ಮೊದಲ ಬಾರಿಗೆ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಲಾಗಿದೆ.
ಹೌದು, ಅಮೆರಿಕದ ಮೆರಿಲ್ಯಾಂಡ್‌ ಆಸ್ಪತ್ರೆಯ ವೈದ್ಯರು ಈ ಪ್ರಾಯೋಗಿಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಿದ್ದಾರೆ.
57 ವರ್ಷದ ಡೇವಿಡ್‌ ಬೆನೆಟ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಇದ್ದದ್ದು ಎರಡು ಆಯ್ಕೆ. ಒಂದು ಸಾವು, ಮತ್ತೊಂದು ಹಂದಿ ಹೃದಯದ ಕಸಿ ಮಾಡಿಸಿಕೊಳ್ಳುವುದು.
ಆಗ ಡೇವಿಡ್‌ ಬೆನೆಟ್‌ ಧೈರ್ಯವಾಗಿ ನಾನು ಬದುಕಲು ಬಯಸುತ್ತೇನೆ. ಇದು ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದ್ದರು.
ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಬೆನೆಟ್‌ ಆರೋಗ್ಯದಲ್ಲಿ ಚೇರಿಕೆಕಂಡುಬಂದಿದ್ದು, ಯಾವುದೇ ತೊಂದರೆ ಇಲ್ಲದೆ ಉಸಿರಾಡುತ್ತಿದ್ದಾರೆ. ಆದರೂ ನಿರ್ಣಾಯಕ ಹಾಗೂ ಪ್ರಾಯೋಕಿಕ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಹೃದಯದ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss