October 10, 2026
Saturday, October 10, 2026
spot_img

ಮಾರುಕಟ್ಟೆಗೆ ಕಾಲಿಟ್ಟ iphone 18 Pro & iPhone 18 Pro Max : ಮಾಲ್‌ ಆಫ್‌ ಏಷ್ಯಾದಲ್ಲಿ ಬೆಳಗ್ಗೆಯಿಂದಲೇ ಕ್ಯೂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐ ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ iphone 18 Pro & iPhone 18 Pro Max ಫೋನ್‌ ಲಭ್ಯವಿದ್ದು, ಜನ ಇದರ ಖರೀದಿಗೆ ಮುಗಿಬಿದ್ದಿದ್ದಾರೆ. ಯಾವ ಹೊಸ ಐ ಫೋನ್‌ ಲಾಂಚ್‌ ಆದರೂ ಈ ಕ್ರೇಝ್‌ ಇದ್ದದ್ದೇ! ಬೆಂಗಳೂರಿನ ಮಾಲ್‌ ಆಫ್‌ ಏಷ್ಯಾದಲ್ಲಿ ಬೆಳಗ್ಗೆಯಿಂದಲೇ ಐಫೋನ್‌ ಶೋರೂಮ್‌ ಮುಂದೆ ಜನ ಜಮಾಯಿಸಿದ್ದಾರೆ.

ಸೆಕೆಂಡ್ಸ್‌ನಲ್ಲಿ ಐ ಫೋನ್‌ ತೆಗೆದುಕೊಳ್ಳೋಕೂ ದುಬಾರಿ ಎಂದುಕೊಳ್ಳುವ ಜನರ ಮಧ್ಯೆ, ಕೈ ತುಂಬಾ ಕಾಸು ಇಟ್ಟುಕೊಂಡು ನಮ್ಮ ನೆಚ್ಚಿನ ಕಲರ್‌ ಸಿಗಬೇಕೆಂದು ಕೆಲಸ ಕಾರ್ಯಗಳನ್ನು ಬಿಟ್ಟು ಫೋನ್‌ ಖರೀದಿಗೆ ಬರುವ ಜನರೂ ಇದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದು, ಜನ ಫೋನ್‌ಗಾಗಿ ಮಾಲ್‌ನಲ್ಲಿ ಕಾಯುತ್ತಾ ಇರುವ ದೃಶ್ಯ ಕಾಣಸಿಗುತ್ತದೆ. ಇನ್ನು ಐಫೋನ್‌ ಸೆಂಟರ್‌ ಸಿಬ್ಬಂದಿ ಇವತ್ತಿನ ಬಹುದೊಡ್ಡ ಲಾಭಕ್ಕಾಗಿ ತಯಾರಾಗಿದ್ದಾರೆ. ಇಂದು ಎಷ್ಟು ಫೋನ್‌ ಮಾರಾಟ ಆಗಬಹುದು ಎನ್ನುವ ಕುತೂಹಲದಲ್ಲಿದ್ದಾರೆ. ಐ ಫೋನ್‌ 18 ಪ್ರೋನ ಬೆಲೆ 1,64,900ರಿಂದ ಆರಂಭವಾಗಿದ್ದರೆ, ಐಫೋನ್‌ 18 ಪ್ರೋ ಮ್ಯಾಕ್ಸ್‌ನ ಬೆಲೆ 1,79,900 ಆಗಿದೆ.

ಮುಂಬೈ ದೆಹಲಿಯಲ್ಲೂ ಐ ಫೋನ್‌ ಫೀವರ್‌

ದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್‌ ಸಿಟಿವಾಕ್‌ ಮಾಲ್‌ ಹಾಗೂ ಮುಂಬೈನ ಬಿಕೆಸಿಯ ಹೊರಗಡೆ ಮಧ್ಯರಾತ್ರಿಯಿಂದಲೇ ಜನ ಲೈನ್‌ನಲ್ಲಿ ನಿಂತು ಸ್ಟೋರ್‌ ಓಪನ್‌ ಆಗಲು ಕಾದಿದ್ದಾರೆ. ಇನ್ನೂ ಸ್ಟೋರ್‌ ಓಪನ್‌ ಆಗದ ಕಾರಣ ಜನ ಊಟ ನಿದ್ದೆ ಬಿಟ್ಟು ಫೋನ್‌ ಅಂಗಡಿಯ ಮುಂದೆ ಜಮಾಯಿಸಿದ್ದಾರೆ. ಈ ರೀತಿ ಹೊಸ ಸೀರೀಸ್‌ ಬಿಡುಗಡೆ ಮಾಡುವ ವೇಳೆಯಾದರೂ ಅಂಗಡಿಯನ್ನು ಸ್ವಲ್ಪ ಮುಂಚಿತವಾಗಿ ಓಪನ್‌ ಮಾಡಬೇಕು. ಮಧ್ಯರಾತ್ರಿಯಿಂದ ಊಟ ತಿಂಡಿ ಇಲ್ಲದೇ ನಿಂತಿದ್ದೇವೆ ಎಂದು ಜನ ಗರಂ ಆಗಿದ್ದಾರೆ. ಸೆಲೆಬ್ರಿಟಿಗಳಾದ ಜೆನಿಲಿಯಾ ದೇಶ್‌ಮುಖ್‌, ರಿತೇಶ್‌ ದೇಶ್‌ಮುಖ್‌ ಹಾಗೂ ಪ್ರಾಜಕ್ತಾ ಕೋಲಿ ನಿನ್ನೆಯೇ ಐ ಫೋನ್‌ ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ತಿಳಿನೀಲಿ, ಲ್ಯಾವೆಂಡರ್‌, ಡೀಪ್‌ ಬರ್ಗೆಂಡಿ ಬಣ್ಣಗಳು ಲಭ್ಯವಿದೆ.

ಮುಂಬೈ-ದೆಹಲಿಯಿಂದ ಬೆಂಗಳೂರಿಗೆ ಬಂದ ಜನ

ಬೆಂಗಳೂರಿನ ಮಾಲ್‌ ಆಫ್‌ ಏಷ್ಯಾದಲ್ಲಿ ಗ್ರಾಹಕರೊಬ್ಬರು ಮಾತನಾಡಿ, ನಾನು ಬೆಳಗ್ಗೆ ಐದು ಗಂಟೆಗೆ ಮಾಲ್‌ ಓಪನ್‌ ಆದ ತಕ್ಷಣ ಒಳಗೆ ಬಂದಿದ್ದೇನೆ. ಮಾಲ್‌ನ ಒಳಗೆ ಹೋಗೋಕೂ ಒಂದು ಕ್ಯೂ ಇತ್ತು. ಉದ್ದನೆಯ ಸರತಿ ಸಾಲನ್ನು ನೋಡಿ ಶಾಕ್‌ ಆಯ್ತು. ದೆಹಲಿ, ಮುಂಬೈ, ಹರಿಯಾಣ ಇನ್ನಿತರ ರಾಜ್ಯಗಳಿಂದ ಜನ ಬೆಂಗಳೂರಿಗೆ ಬರೀ ಫೋನ್‌ ಖರೀದಿಸಲು ಬಂದಿದ್ದಾರೆ. ನಾನು ಐಫೋನ್‌ ಏಳರ ಸೀರೀಸ್‌ ರಿಲೀಸ್‌ ಆದಾಗ ಇದೇ ರೀತಿ ಕ್ಯೂನಲ್ಲಿ ನಿಂತು ಖರೀದಿ ಮಾಡಿದ್ದೆ. ಇದಾದ ನಂತರದಿಂದ ಹೊಸ ಐಫೋನ್‌ ರಿಲೀಸ್‌ ಆದ ತಕ್ಷಣ ಅದನ್ನು ಖರೀದಿ ಮಾಡುತ್ತಾ ಬಂದಿದ್ದೇನೆ. ಇದು ನನಗೆ ಒಂದು ದೊಡ್ಡ ಹಬ್ಬಂದಂತೆ. ಬಿಡದೇ ಫೋನ್‌ ಖರೀದಿಸಿಯೇ ಮನೆಗೆ ಹೋಗುತ್ತೇನೆ ಎಂದಿದ್ದಾರೆ.

Must Read