ಈ ದೇಶದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವು ಕಂಪನಿಗಳಲ್ಲಿ ಕ್ಯಾಮರಾ ಇಲ್ಲದ ಫೋನ್ ತರಬೇಕು ಅನ್ನೋ ರೂಲ್ಸ್ ಇದೆ, ಇನ್ನು ಕೆಲವು ಕಡೆ ಊಟದ ಬ್ರೇಕ್ ಬಿಟ್ಟು ಇನ್ಯಾವಾಗಲೂ ಮೊಬೈಲ್ ನೋಡಬಾರದು ಅನ್ನೋ ರೂಲ್ಸ್ ಇದೆ.

ಆದರೆ ಚೀನಾದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ಬಳಸದಂತೆ ಸೂಚನೆ ನೀಡಲಾಗಿದೆ. ಅಮೆರಿಕ ಹಾಗೂ ಚೀನಾ ನಡುವೆ ಪೈಪೋಟಿ ಹೆಚ್ಚಿದ್ದು, ಕ್ಸಿ ಜಿನ್‌ಪಿಂಗ್ ಸರ್ಕಾರ ಐಫೋನ್ ಬಳಸದಂತೆ ಸೂಚನೆ ನೀಡಿದೆ.

ಸರ್ಕಾರಿ ಸಿಬ್ಬಂದಿ ಗ್ರೂಪ್ ಚಾಟ್ ಅಥವಾ ಮೀಟಿಂಗ್‌ಗಳಲ್ಲಿ ಐಫೋನ್ ಬಳಕೆ ಮಾಡಬಾರದು, ಅಷ್ಟೇ ಅಲ್ಲ ಇತರೆ ವಿದೇಶಿ ಬ್ರ್ಯಾಂಡ್‌ಗಳ ಸಾಧನಗಳನ್ನು ಸರ್ಕಾರಿ ಕೆಲಸಗಳಿಗಾಗಿ ಬಳಸಬಾರದು ಎಂದು ಸೂಚನೆ ನೀಡಿದೆ.

ಆಪಲ್ ಸಾಧನಗಳಿಗೆ ಅಮೆರಿಕ ನಂತರ ಚೀನಾ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾದ ಈ ಕ್ರಮದಿಂದಾಗಿ ಕಂಪನಿಗೆ ಸಮಸ್ಯೆಯಾಗುವುದಂತೂ ಗ್ಯಾರೆಂಟಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!