ಜೋಸ್‌ ಬಟ್ಲರ್‌ ನನ್ನ ಎರಡನೇ ಪತಿಯಂತೆ ಎಂದ ಮತ್ತೋರ್ವ ರಾಯಲ್ಸ್‌ ಸ್ಟಾರ್‌ ಆಟಗಾರನ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂದ್ಯಗಳು ರೋಚಕವಾಗಿ ಸಾಗುತ್ತಿರುವಾಗ ಕ್ಯಾಮೆರಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ ಸ್ಟಾರ್‌ ಆಟಗಾರರ ಪತ್ನಿಯರ ಸಂಭ್ರಮ, ಪ್ರೇಕ್ಷಕರ ಗ್ಯಾಲರಿಯಲ್ಲಿನ ಫ್ಯಾನ್‌ ಮೂವ್‌ಮೆಂಟ್‌ ಗಳನ್ನು ತೋರಿಸುವುದು ಐಪಿಎಲ್‌ ನ ಪ್ರಮುಖ ಆಕರ್ಷಣೆಗಳಲ್ಲೊಂದು.
ಈ ಋತುವಿನಲ್ಲಿ ಅದ್ಭುತ ಫಾರ್ಮ್‌ ನಲ್ಲಿರುವ ರಾಜಸ್ಥಾನ ರಾಯಲ್ಸ್‌ ನ ಜೋಸ್ ಬಟ್ಲರ್‌ ಚೆಂಡನ್ನು ಬೌಂಡರಿ ಸಿಕ್ಸರ್ ಗಳೆಡೆ ಅಟ್ಟಿದಾಗಲೆಲ್ಲಾ ಪೇಕ್ಷಕರ ಗ್ಯಾಲರಿಯಲ್ಲಿ ಚಾಹಲ್‌ ಪತ್ನಿ ಧನಶ್ರೀ, ಅಶ್ವಿನ್‌ ಪತ್ನಿ ಪ್ರೀತಿ ಹಾಗೂ ಮತ್ತೊಬ್ಬ ವಿದೇಶಿ ಮಹಿಳೆಯ ಸಂಭ್ರಮಿಸುತ್ತಿರುವುದು ಅನೇಕಾ ಬಾರಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧನಶ್ರೀ ಜೊತೆಗೆ ಸಂಭ್ರಮಿಸುವ ವಿದೇಶಿ ಮಹಿಳೆಯನ್ನು ಬಟ್ಲರ್‌ ಪತ್ನಿ ಎಂದೇ ಬಹುತೇಕ ಅಭಿಮಾನಿಗಳು ಭಾವಿಸಿದ್ದಾರೆ. ಆದರೆ ಆಕೆ ಬಟ್ಲರ್‌ ಪತ್ನಿಯಲ್ಲ, ರಾಜಸ್ಥಾನ್‌ ರಾಯಲ್ಸ್‌ ಮತ್ತೊರ್ವ ಆಟಗಾರ ದಕ್ಷಿಣ ಆಫ್ರಿಕಾದ ಮತ್ತೊರ್ವ ಸ್ಟಾರ್‌ ಆಟಗಾರ ವ್ಯಾನ್‌ ಡರ್‌ ಡಸ್ಸೆನ್‌ ಪತ್ನಿ ಲಾರ. ಫ್ಯಾನ್‌ ಗಳು ಈ ವಿಚಾರವನ್ನು ತಪ್ಪಾಗಿ ಭಾವಿಸಿರುವುದು ಆಕೆಯ ಗಮನಕ್ಕೆ ಬಂದಿದ್ದು ಈ ಕುರಿತು ಮಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ರಾಯಲ್ಸ್ ಪಾಡ್‌ಕ್ಯಾಸ್ಟ್‌ ನಲ್ಲಿ ತಮಾಷೆಯಾಗಿ ಮಾತನಾಡಿರುವ ಲಾರಾ, ” ಬಟ್ಲರ್‌ ಶತಕ ಸಿಡಿಸಿದಾಗಲೆಲ್ಲಾ ನಾನು ಸಂಭ್ರಮಿಸುವುದನ್ನು ನೋಡಿ ಹೆಚ್ಚಿನ ಅಭಿಮಾನಿಗಳು ನಾನು ಬಟ್ಲರ್‌ ಪತ್ನಿ ಎಂದು ಭಾವಿಸಿದ್ದಾರೆ ಎಂಬ ವಿಚಾರ ತಿಳಿದುಬಂತು. ನಾನೀಗ ಅಭಿಮಾನಿಗಳಿಂದ ಜೋಸ್‌ ಪತ್ನಿ ಲೂಯಿಸ್ ಎಂದು ಕರೆಸಿಕೊಳ್ಳುತ್ತಿದ್ದೇನೆ, ಆದ್ದರಿಂದ ನಾನು ಜೋಸ್‌ ಬಟ್ಲರ್‌ ರನ್ನು ನನ್ನ ಎರಡನೇ ಪತಿಯಾಗಿ ಸ್ವೀಕರಿಸುತ್ತಿದ್ದೇನೆ ಎಂದು ನಗುತ್ತಲೇ ಹೇಳಿದ್ದಾರೆ. ಲೂಯಿಸ್‌ ರನ್ನು ಈವರೆಗೆ ಭೇಟಿ ಮಾಡಿಲ್ಲ. ಆದರೆ ಜನರು ಜೋಸ್‌ ಪತ್ನಿ ಎಂದು ಗುರುತಿಸುವುದು ತಮಾಷೆ ಎಂದೆನಿಸುತ್ತದೆ. ನನ್ನ ಪತಿ ರಸ್ಸೀ ಜಾಸ್ತಿ ಪಂದ್ಯಗಳನ್ನಾಡಿಲ್ಲ, ಅವರು ಆಡಿದ್ದರೆ ಇಷ್ಟೇ ಸಂಭ್ರಮ ಪಡುತ್ತಿದ್ದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ನಾನು ಪ್ರತಿ ಕ್ಷಣವನ್ನು ಸಂಭ್ರಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಜಸ್ಥಾನ್‌ ರಾಯಲ್ಸ್‌ ತಂಡವು ಇಂದು ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ ಗೆ ಪ್ರವೇಶ ಪಡೆಯಲಿದೆ. ಸೋತ ತಂಡವು ಟೂರ್ನಿಯಿಂದಲೇ ಹೊರಬೀಳಲಿದೆ. ಅಭಿಮಾನಿಗಳು ಈ ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!