ಸತತ ಸೋಲುಗಳು ನಡುವೆ ಆರ್ಸಿಬಿ ದಾಖಲೆ ಸರಿಗಟ್ಟಿದ ಮುಂಬೈ ಇಂಡಿಯನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶನಿವಾರ ಮುಂಬೈನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ18 ರನ್‌ ಗಳಿಂದ ಸೋಲನ್ನಪ್ಪುವ ಮೂಲಕ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಸತತ ಆರನೇ ಸೋಲನ್ನು ಕಂಡಿದೆ. ಈ ಮೂಲಕ ಹೀನಾಯ ದಾಖಲೆಯೊಂದನ್ನು ಮುಂಬೈ ತನ್ನ ಹೆಸರಿಗೆ ಬರೆದುಕೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಐಪಿಎಲ್‌ ಇತಿಹಾಸದಲ್ಲಿ ತಮ್ಮ ಮೊದಲ ಆರು ಮುಖಾಮುಖಿಗಳಲ್ಲಿಯೂ ಸೋತ ಮೂರನೇ ತಂಡ ಎನಿಸಿಕೊಂಡಿದೆ.
2013ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್) ಮತ್ತು 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಹಿಂದೆ ಈ ಕೆಟ್ಟ ದಾಖಲೆಯನ್ನು ಬರೆದಿದ್ದವು. ಆದರೆ ಆ ಎರಡೂ ಎರಡೂ ತಂಡಗಳು ತಮ್ಮ ಏಳನೇ ಪಂದ್ಯವನ್ನು ಗೆದ್ದಿದ್ದವು. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುರುವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಒಂದುವೇಳೆ ಮುಂಬೈ ಇಂಡಿಯನ್ಸ್‌ಗೆ ಈ ಪಂದ್ಯದಲ್ಲಿಯೂ ಮತ್ತೊಂದು ಸೋಲು ಎಂದರೆ ಐಪಿಎಲ್‌ನಲ್ಲಿ ಮೊದಲ ಏಳು ಪಂದ್ಯಗಳನ್ನು ಸೋತ ಮೊದಲ ತಂಡ ಎನಿಸಿಕೊಳ್ಳಲಿದೆ.
2014 ರ ಟೂರ್ನಿ ಆರಂಭದಲ್ಲಿಯೂ ಮುಂಬೈಗೆ ಐದು ಸೋಲುಗಳು ಎದುರಾಗಿತ್ತು. ಆದಾಗ್ಯೂ ಅದ್ಭುತ ಮರುಹೋರಾಟ ಪ್ರದರ್ಶಿಸಿದ್ದ ರೋಹಿತ್‌ ಪಡೆ ಪ್ಲೇಆಫ್ ತಲುಪಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!