ನಾನಿರುವಾಗ ನಿನಗೆ ಭಯವೇಕೆ ಮಗು…? ತಾಯಿ ಪ್ರೀತಿಗೆ ನಿದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ಮರಿಯನ್ನು ರಕ್ಷಿಸಲು ಆನೆ ವಿಶ್ವಮಾನವ ಪ್ರಯತ್ನ. ಛಲ ಬಿಡದೆ ಸತತ ಪ್ರಯತ್ನದಿಂದಾಘಿ ಕೊನೆಗೂ ತನ್ನ ಮರಿಯನ್ನು ದಡ ಸೇರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ʻದಟ್ಸ್ ಮದರ್ ಲವ್ʼ ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಆನೆಗಳ ಹಿಂಡೊಂದು ಕಾಲುವೆ ದಾಟುತ್ತಿದ್ದ ವೇಳೆ ಮರಿ ಆನೆ ನೀರಿನ ಹರಿವನ್ನು ತಡೆಯಲು ಸಾಧ್ಯವಾಗದೆ ಕೊಚ್ಚಿಹೋಗುತ್ತಿತ್ತು. ಇದನ್ನು ಗಮನಿಸಿದ ತಾಯಿ ಆನೆ ತನ್ನ ದಂತದಿಂದ ಮರಿ ಆನೆಯನ್ನು ತಡೆಯಲು ಯತ್ನಿಸಿತು. ಹಾಗೆ ಎರಡ್ಮೂರು ಬಾರಿ ಪ್ರಯತ್ನಿಸಿದರೂ ಮರಿ ಆನೆಗೆ ನೀರಿನ ಹರಿವನ್ನು ತಡೆದುಕೊಳ್ಳಲಾಗಲಿಲ್ಲ. ತಾಯಿ ಆನೆ ತನ್ನ ಕೈಲಾದ ಪ್ರಯತ್ನ ಮಾಡಿ ತನ್ನ ಮಗುವನ್ನು ದಡಕ್ಕೆ ತಂದಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!