Ipl 2022 | ಕೊನೇ ಓವರ್‌ನಲ್ಲಿ ಗೆದ್ದುಬೀಗಿದ ಪಂಜಾಬ್;‌ ಮುಂಬೈ ಇಂಡಿಯನ್ಸ್‌ ಗೆ ಸತತ 5ನೇ ಸೋಲಿನ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪುಣೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ 12 ರನ್‌ ಗಳಿಂದ ಸೋಲು ಕಾಣುವ ಮೂಲಕ ಮುಂಬೈ ಇಂಡಿಯನ್ಸ್‌ ಸತತ ಐದನೇ ನೋಲಿನ ಮುಖಭಂಗಕ್ಕೀಡಾಗಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್‌, ಆರಂಭಿಕ ಜೋಡಿಯಾದ ನಾಯಕ ಮಯಾಂಕ್‌ ಅಗರ್ವಾಲ್‌ (52) ಹಾಗೂ ಶಿಖರ್‌ ಧವನ್‌ (70) ಅಬ್ಬರದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ ಗಳಲ್ಲಿ 198 ರನ್‌ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು.
ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಪರ ಡೆವಾಲ್ಡ್‌ ಬ್ರೇವಿಸ್‌ (49), ಸೂರ್ಯಕುಮಾರ್‌ (43) ಹೋರಾಟಗಳ ಹೊರತಾಗಿಯೂ 20 ಓವರ್‌ ಗಳಲ್ಲಿ 9 ವಿಕೆಟ್‌ ಗಳನ್ನಷ್ಟೇ ಕಲೆಹಾಕಲು ಶಕ್ತವಾಗಿ ಸೋಲೊಪ್ಪಿಕೊಂಡಿತು.
ಪಂಜಾನಬ್‌ ಪರ ಉತ್ತಮ ದಾಳಿ ಸಂಘಟಿಸಿದ ಓಡೆನ್‌ ಸ್ಮಿತ್‌ 4 ಹಾಗೂ ಕರ್ಗಿಸೋ ರಬಾಡ 2 ವಿಕೆಟ್‌ ಕಬಳಿಸಿದರು. ಈ ಸೋಲಿನೊಂದಿಗೆರ ಮುಂಬೈ ಅಂಕಪಟ್ಟಿಯಲ್ಲಿ 10 ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!