IPL 2022| ಕೆಕೆಆರ್‌ ವಿರುದ್ಧ 3 ವಿಕೆಟ್‌ ಗಳ ರೋಚಕ ಗೆಲುವು ಸಾಧಿಸಿದ ಆರ್ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ವಿಕೆಟ್‌ ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿರುವ ಫಾಫ್‌ ಡುಪ್ಲೆಸಿ ಪಡೆ ಪಾಯಿಂಟ್ಸ್‌ ಟೇಬಲ್‌ ನಲ್ಲಿ 6 ನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿದ ಶ್ರೇಯಸ್‌ ಐಯ್ಯರ್‌ ಬಳಗ ಆರ್ಸಿಬಿ ಬೌಲರ್‌ ಗಳ ಕರಾರುವಕ್‌ ದಾಳಿಗೆ ತತ್ತರಿಸಿ ಕಡಿಮೆ ಮೊತ್ತಕ್ಕೆ ಕುಸಿಯಿತು.
ಕೆಕೆಆರ್ 18. 5 ಓವರ್ ಗಳಲ್ಲಿಕೇವಲ 128 ರನ್ ಗಳಿಗೆ ಸರ್ವಪತನ ಖಂಡಿತು. ಅಜಿಂಕ್ಯ ರಹಾನೆ (9) ವೆಂಕಟೇಶ್ ಅಯ್ಯರ್ (10) ನಾಯಕ ಶ್ರೇಯಸ್ ಅಯ್ಯರ್ (13) ನಿತೀಶ್ ರಾಣಾ (10) ಸುನಿಲ್ ನಾರಾಯಣ್ 12, ಸ್ಯಾಮ್ಸ್ ಬಿಲ್ಲಿಂಗ್ಸ್ 14 ಹಾಗೂ ಶೆಲ್ಡನ್ ಜ್ಯಾಕ್ಸನ್ ಶೂನ್ಯಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆಕ್ರಮಣಕಾರಿ ಆಟವಾಡಿದ ರಸೆಲ್‌ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದ್ದರು. 18 ಎಸೆತಗಳಲ್ಲಿ 3 ಸಿಕ್ಸರ್‌ ಒಂದು ಬೌಂಡರಿ ನಡರವಿನಿಂದ 25 ರನ್‌ ಕಲೆ ಹಾಕಿದ್ದ ರಸೆಲ್‌ ವಿಕೆಟ್‌ ಪಡೆಯುವ ಮೂಲಕ ಹರ್ಷಲ್‌ ಪಟೇಲ್‌ ಆರ್ಸಿಬಿ ಕ್ಯಾಪ್‌ ನಲ್ಲಿ ಹರ್ಷ ತಂಡದರು. ಆರ್ ಸಿಬಿ ಪರ ಹಸರಂಗ ನಾಲ್ಕು, ಆಕಾಶ್ ಮೂರು, ಹರ್ಷಲ್ ಎರಡು ಹಾಗೂ ಸಿರಾಜ್ ಒಂದು ವಿಕೆಟ್ ಪಡೆದರು.
ಕೆಕೆಆರ್ ನೀಡಿದ ಸಾಧಾರಣ ಗುರಿ ಬೆನ್ನಟ್ಟಿದ್ದ ಆರ್ ಸಿಬಿ 17 ರನ್ ಗಳಿಸುವಷ್ಟರಲ್ಲಿ ಡುಪ್ಲೆಸಿ, ಕೊಹ್ಲಿ, ಅನುಜ್‌ ರಾವತ್‌ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಡೇವಿಡ್ ವಿಲ್ಲಿ ಹಾಗೂ ಶೆರ್ಫಾನ್ ರುಥರ್ ಪೋರ್ಡ್ ಉತ್ತಮ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ತಂಡರು. ಅವರ ವಿಕೆಟ್‌ ಗಳ ಪತನದ ನಂತರ ಶಹಬಾಜ್‌ ಅಹ್ಮದ್‌ ಆಕ್ರಮಣಕಾರಿ ಆಟದ ಮೂಲಕ ತಂಡವನ್ನು ಆಧರಿಸಿದರು. ಸ್ಲಾಗ್‌ ಓವರ್‌ ಗಳಲ್ಲಿ ಆರ್ಭಟಿಸಿದ ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 14ರನ್‌ ಹಾಗೂ ಹರ್ಷಲ್ ಪಟೇಲ್ 6 ಎಸೆತಗಳಲ್ಲಿ 10 ರನ್ ಗಳ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಆರ್ಸಿಬಿ 19. 2 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಗೆಲುವು ಒಲಿಸಿಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!