ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌ ಗೆ ವಾಟ್ಸನ್‌ ಸಹಾಯಕ ಕೋಚ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತಮ್ಮ ಹೊಸ ಸಹಾಯಕ ಕೋಚ್‌ ಆಗಿ ಆಸ್ಟ್ರೇಲಿಯಾದ ಆಲ್‌ ರೌಂಡರ್‌ ಶೇನ್‌ ವಾಟ್ಸನ್‌ ಅವರನ್ನು ಘೋಷಣೆ ಮಾಡಿದೆ.

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್‌ ನಲ್ಲಿ ಮುಖ್ಯ ಕೋಚ್‌ ಆಗಿ ರಿಕಿ ಪಾಂಟಿಂಗ್‌, ಸಹಾಯಕ ಕೋಚ್‌ ಪ್ರವೀಣ್‌ ಆಮ್ರೆ, ಅಜಿತ್‌ ಅಗರ್ಕರ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ಜೇಮ್ಸ್‌ ಹೋಪ್ಸ್‌ ಅವರ ತಂಡಕ್ಕೆ ಈಗ ಶೇನ್‌ ವಾಟ್ಸನ್‌ ಕೂಡ ಸೇರಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ವಾಟ್ಸನ್, ಐಪಿಎಲ್‌ ವಿಶ್ವದ ಅತ್ಯುತ್ತಮ ಟಿ20 ಪಂದ್ಯಾವಳಿಯಾಗಿದೆ. ನಾನು ಆಟಗಾರನಾಗಿ ಇಲ್ಲಿ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ.2008ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಜಯಗಳಿಸಿತ್ತು.
ನಂತರ ಆರ್‌ ಸಿಬಿ ಹಾಗೂ ಸಿಎಸ್‌ ಕೆ ತಂಡದೊಂದಿಗೆ ಮರೆಯಲಾಗದ ನೆನಪುಗಳಿವೆ. ಈಗ ಕೋಚಿಂಗ್‌ ಮಾಡುವ ಅವಕಾಶ. ಅದರಲ್ಲೂ ರಿಕ್ಕಿ ಪಾಂಟಿಂಗ್‌ ಅವರೊಂದಿಗೆ ಕೆಲಸ ಮಾಡುವ ಅವಕಾಶ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!