ಡೆತ್‌ ಓವರ್‌ ನಲ್ಲಿ ಶಮಿ ಮ್ಯಾಜಿಕ್..!‌ ಆಸಿಸ್‌ ವಿರುದ್ಧ ರೋಚಕ ಗೆಲುವು ಒಲಿಸಿಕೊಂಡ ಟೀಂ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟೇಲಿಯಾ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಆಸಿಸ್‌ ವಿರುದ್ಧ 6 ರನ್‌ ಗಳ ರೋಚಕ ಗೆಲುವು ಪಡೆಯುವ ಮೂಲಕ ಟೀಂ ಇಂಡಿಯಾ ಟಿ 20 ಸಮರಕ್ಕೆ ತಾನು ಸಿದ್ಧ ಎದಂಬ ಸಂದೇಶವನ್ನು ರವಾನಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಕಳೆದ ಕೆಲ ದಿನಗಳಿಂದ ಕಾಡುತ್ತಿದ್ದ ಭಾರತದ ಡೆತ್‌ ಬೌಲಿಂಗ್‌ ದೌರ್ಬಲ್ಯಕ್ಕೆ ಈ ಪಂದ್ಯದಲ್ಲಿ ಸಮಾಧಾನಕರ ಉತ್ತರ ಸಿಕ್ಕಿದ್ದು, ಇಷ್ಟು ದಿನ ಗೆಲುವಿನಂಚಿನಲ್ಲಿ ಪಂದ್ಯಗಳನ್ನು ಸೋಲುತ್ತಿದ್ದ ಟೀಂ ಇಂಡಿಯಾ, ಇಂದು ಸೋಲಿನಂಚಿನಲ್ಲಿ ಪಂದ್ಯ ಗೆಲ್ಲುವ ಮೂಲಕ ದುರ್ಬಲ ಬೌಲಿಂಗ್‌ ವಿಭಾಗವೆಂದು ಟೀಕಿಸುತ್ತಿದ್ದ ಟೀಕಾಕಾರರಿಗೆ ಸಂದೇಶ ರವಾನಿಸಿದೆ.
ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿಸದ ಭಾರತ ಭರ್ಜರಿ ಆಟವಾಡಿತು. ಉಪನಾಯಕ  ಕೆಎಲ್ ರಾಹುಲ್ ಕೇವಲ 33 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 50 ರನ್ ಗಳಿಸಿ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡೊಯ್ದರು. ದಿನೇಶ್‌ ಕಾರ್ತಿಕ್‌ 20 (14 ಎಸೆತ), ಕೊಹ್ಲಿ 19(13 ಎಸೆತ) ಉತ್ತಮವಾಗಿ ಸಾಥ್‌ ನೀಡಿದರೆ, ರೋಹಿತ್ವ 14, ಹಾರ್ದಿಕ್‌ 2, ಅಕ್ಷರ್‌ 6 ಬ್ಯಾಟ್‌ ನಿಂದ ನಿರೀಕ್ಷಿತ ರನ್‌ ಸಿಡಿಯಲಿಲ್ಲ.  ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
187 ರನ್‌ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಅವರ 76 (54 ಎಸೆತ) ಭರ್ಜರಿ ಆಟದಿಂದಾಗಿ ಪಂದ್ಯದ ಬಹುತೇಕ ಅವಧಿ ಪೂರ್ಣ ಹಿಡಿತವನ್ನು ಹೊಂದಿತ್ತು. ಆದರೆ ಪಂದ್ಯದ ಕೊನೆಯ ಎರಡು ಓವರ್‌ ಗಳಲ್ಲಿ ಭಾರತೀಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಒಟ್ಟಾಗಿ ವಿಜಯವನ್ನು ಕಸಿದುಕೊಳ್ಳಲು ಅಮೋಘ ಪ್ರಯತ್ನ ಮಾಡಿದರು. ಕೊನೆಯ 2 ಓವರ್ ಗಳಲ್ಲಿ ಆಸಿಸ್‌ ಗೆ 16 ರನ್‌ ಬೇಕಿದ್ದಾಗ 19 ನೇ ಓವರ್‌ ಎಸೆದ ಹರ್ಷಲ್‌ ಪಟೇಲ್‌ ಕೇವಲ 5 ರನ್‌ ನೀಡಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು. ಆಸಿಸ್‌ ಗೆ ಕೊನೆಯ ಓವರ್‌ ನಲ್ಲಿ 11 ರನ್‌ ಬೇಕಿದ್ದಾಗ ತಮ್ಮ ಮೊದಲ ಹಾಗೂ ಇನ್ಸಿಂಗ್ಸ್‌ ಅಂತಿಮ ಓವರ್‌ ಎಸೆದ ಶಮಿ ಅದ್ಭುತ ಯಾರ್ಕರ್‌ ಗಳು ಹಾಗೂ ಹಾರ್ಡ್‌ ಲೆಂಗ್ತ್ ಎಸೆತಗಳ ಮೂಲಕ ಅದ್ಭುತವಾಗಿ ಬೌಲ್‌ ಮಾಡಿದರು.
ಶಮಿ ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ( ಒಂದು ರನ್‌ ಔಟ್) ಪಡೆದು ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು. 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!