ಹೊಸದಿಗಂತ ಡಿಜಿಟಲ್ ಡೆಸ್ಕ್
IPL 2023 ಕ್ಕೆ ಸಿದ್ಧತೆಗಳು ಶುರುವಾಗಿವೆ. ಈ ಆವೃತ್ತಿಯಲ್ಲಿ ಅತ್ಯುತ್ತಮ ತಂಡ ಕಟ್ಟಲು ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಪ್ಲಾನ್ ಹಾಕಿಕೊಂಡಿವೆ. ಡಿ.23 ರಂದು ನಡೆಯಲ್ಲಿರುವ ಮಿನಿ ಹರಾಜಿನಲ್ಲಿ ತಾವು ಯೋಜಿಸಿದ ಆಟಗಾರರನ್ನು ಕೊಳ್ಳುವ ಮೂಲಕ ಪ್ರಾಂಚೈಸಿಗಳು ತಮ್ಮ ಪ್ಲಾನ್ ಅನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿವೆ. ಡಿಸೆಂಬರ್ 23 ರಂದು ಈ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಹರಾಜಿನ ಅಂತಿಮ ಪಟ್ಟಿಯಲ್ಲಿ 405 ಆಟಗಾರರಿಗೆ ಸ್ಥಾನ ನೀಡಲಾಗಿದ್ದು, ಅವರಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಪ್ರಾಂಚೈಸಿಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಕೊಳ್ಳಲು ಈ ಹರಾಜಿನಲ್ಲಿ ಪೈಪೋಟಿ ನಡೆಸಲಿದ್ದಾರೆ. IPL 2023 ಕಿರು-ಹರಾಜಿನ ಎಲ್ಲಾ ವಿವರಗಳು ಇಲ್ಲಿವೆ.
IPL 2023 ಹರಾಜು ದಿನಾಂಕ, ಸಮಯ, ಸ್ಥಳ:
ಐಪಿಎಲ್ 2023 ರ ಹರಾಜು ಡಿಸೆಂಬರ್ 23 ರಂದು ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿದೆ. ಮಿನಿ ಹರಾಜು ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗಿ ಸಂಜೆಯವರೆಗೂ ನಡೆಯಲಿದೆ.
IPL 2023 ಹರಾಜು ನಿಯಮಗಳು
ಈ ಹರಾಜಿನಲ್ಲಿ ಪ್ರತಿ ಫ್ರ್ಯಾಂಚೈಸಿ ಸಂಪೂರ್ಣ ಬಜೆಟ್‌ನ 75% ರಷ್ಟು ಖರ್ಚು ಮಾಡಲೇಬೇಕು. ಈ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಆಯ್ಕೆ ಇರುವುದಿಲ್ಲ. ಪ್ರತಿ ಫ್ರಾಂಚೈಸಿಯ ತಂಡವು ಕನಿಷ್ಠ 18 ಆಟಗಾರರನ್ನು ಮತ್ತು ಗರಿಷ್ಠ 25 ಆಟಗಾರರನ್ನು ಒಳಗೊಂಡಿರಬೇಕು.
IPL 2023 ಹರಾಜಿನಲ್ಲಿ ಪ್ರತಿ ತಂಡದ ಉಳಿದ ಪರ್ಸ್ ಮೌಲ್ಯ
ಮುಂಬೈ ಇಂಡಿಯನ್ಸ್ – ರೂ 20.05 ಕೋಟಿ (12 ಸ್ಥಾನಗಳು)
ಚೆನ್ನೈ ಸೂಪರ್ ಕಿಂಗ್ಸ್ – ರೂ 20.45 ಕೋಟಿ (9 ಸ್ಥಾನಗಳು)
ದೆಹಲಿ ಕ್ಯಾಪಿಟಲ್ಸ್ – ರೂ 19.45 ಕೋಟಿ (7 ಸ್ಥಾನಗಳು)
ಗುಜರಾತ್ ಟೈಟಾನ್ಸ್ – ರೂ 19.25 ಕೋಟಿ (10 ಸ್ಥಾನಗಳು)
ಕೋಲ್ಕತ್ತಾ ನೈಟ್ ರೈಡರ್ಸ್ – ರೂ 7.05 ಕೋಟಿ (14 ಸ್ಥಾನಗಳು)
ಲಕ್ನೋ ಸೂಪರ್ ಜೈಂಟ್ಸ್ – ರೂ 23.35 ಕೋಟಿ (14 ಸ್ಥಾನಗಳು)
ಪಂಜಾಬ್ ಕಿಂಗ್ಸ್ – ರೂ 32.2 ಕೋಟಿ (12 ಸ್ಥಾನಗಳು)
ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 8.75 ಕೋಟಿ (9 ಸ್ಥಾನಗಳು)
ರಾಜಸ್ಥಾನ್ ರಾಯಲ್ಸ್ – ರೂ 13.2 ಕೋಟಿ (13 ಸ್ಥಾನಗಳು)
ಸನ್‌ರೈಸರ್ಸ್ ಹೈದರಾಬಾದ್ – ರೂ 42.25 ಕೋಟಿ (17 ಸ್ಥಾನಗಳು)
2 ಕೋಟಿ ಮೂಲ ಬೆಲೆ ಆಟಗಾರರು:
ಸ್ಯಾಮ್ ಕರ್ರಾನ್, ಟಾಮ್ ಬ್ಯಾಂಟನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಜೇಮೀ ಓವರ್‌ಟನ್, ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಕೇನ್ ವಿಲಿಯಮ್ಸನ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ರಿಲೀ ರೊಸ್ಸೌ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.
1.5 ಕೋಟಿ ಮೂಲ ಬೆಲೆ:
ಸೀನ್ ಅಬಾಟ್, ರಿಲೆ ಮೆರೆಡಿತ್, ಝೈ ರಿಚರ್ಡ್ಸನ್, ಆಡಮ್ ಝಂಪಾ, ಶಾಕಿಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜಾಕ್ಸ್, ಡೇವಿಡ್ ಮಲನ್, ಜೇಸನ್ ರಾಯ್, ಶೆರ್ಫೇನ್ ರುದರ್ಫೋರ್ಡ್, ನಾಥನ್ ಕೌಲ್ಟರ್-ನೈಲ್.
1 ಕೋಟಿ ಮೂಲ ಬೆಲೆ:
ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್, ಮೊಯಿಸಸ್ ಹೆನ್ರಿಕ್ಸ್, ಆಂಡ್ರ್ಯೂ ಟೈ, ಜೋ ರೂಟ್, ಲ್ಯೂಕ್ ವುಡ್, ಮೈಕಲ್ ಬ್ರೇಸ್‌ವೆಲ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಹೆನ್ರಿಚ್ ಕಿಜ್ಲೇಸ್ , ಕುಸಲ್ ಪೆರೆರಾ, ರೋಸ್ಟನ್ ಚೇಸ್, ರಖೀಮ್ ಕಾರ್ನ್‌ವಾಲ್, ಶಾಯ್ ಹೋಪ್, ಡೇವಿಡ್ ವೈಸ್.
IPL 2023 ಮಿನಿ ಹರಾಜು ನೇರಪ್ರಸಾರ ಎಲ್ಲಿ?
IPL 2023 ಮಿನಿ ಹರಾಜು ಪ್ರಕ್ರಿಯೆಯನ್ನು ಟಿವಿಯಲ್ಲಾದರೆ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಆನ್‌ಲೈನ್‌ನಲ್ಲಿ ವೀಕ್ಷಿಸುವುದಾದೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ನೋಡಬಹುದಾಗಿದೆ.