IPL 2023: ಹರಾಜಿನಿಂದ ಹಿಂದೆ ಸರಿದ ಟೀಂ ಇಂಡಿಯಾದ ಇಬ್ಬರು ಸ್ಟಾರ್‌ ಆಟಗಾರರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 2023ರ ಕ್ರೇಜ್‌ ನಿಧಾನವಾಗಿ ಹೆಚ್ಚುತ್ತಿದೆ. ಕಡಲನಗರಿ ಕೊಚ್ಚಿಯಲ್ಲಿ ಸೀಸನ್ 16 ಮಿನಿ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಆದರೆ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ಹರಾಜಿನಿಂದ ಹಿಂದೆ ತರುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಡಿಸೆಂಬರ್ 23 ರಂದು, ಐಪಿಎಲ್ 2023 ಹರಾಜು ಕೊಚ್ಚಿಯಲ್ಲಿ ನಡೆಯಲಿದೆ. 991 ಆಟಗಾರರು ತಮ್ಮ ಹೆಸರನ್ನು ಹರಾಜಿಗೆ ಇಡಲು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 991 ಆಟಗಾರರಲ್ಲಿ 277 ವಿದೇಶಿ ಆಟಗಾರರು ಮತ್ತು 714 ಭಾರತೀಯರು ಇದ್ದಾರೆ, ಆದರೆ ಅವರಲ್ಲಿ 87 ಮಂದಿಗೆ ಮಾತ್ರ ಹರಾಜಿನಲ್ಲಿ ಕೊಳ್ಳಲು ಅವಕಾಶವಿದೆ.
ಟೀಂ ಇಂಡಿಯಾ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಅವರು  ಐಪಿಎಲ್ 2023 ಹರಾಜಿನಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಡಿದ್ದಾರೆ. ಇಬ್ಬರನ್ನೂ ಟೆಸ್ಟ್ ಸ್ಪೆಷಲಿಸ್ಟ್‌ಗಳೆಂದು ಪರಿಗಣಿಸಲಾಗಿರುವುದರಿಂದ, ಪ್ರಾಂಚೈಸಿಗಳು ಅವರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವುವ ಬಗ್ಗೆ ಅನುಮಾನವಿತ್ತು.
ಪೂಜಾರ ಮತ್ತು ವಿಹಾರಿ ಇಬ್ಬರೂ ಈ ಹಿಂದೆ ಲೀಗ್ ಆಟದಲ್ಲಿ ಭಾಗವಹಿಸಿದ್ದಾರೆ. ಪೂಜಾರ 2021 ರಲ್ಲಿ CSK ಯೊಂದಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮತ್ತೊಂದೆಡೆ ವಿಹಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಇಬ್ಬರೂ ಈಗ ತಮ್ಮ ಟೆಸ್ಟ್ ಪಂದ್ಯದ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.
ಚೇತೇಶ್ವರ ಪೂಜಾರ:
2021 ರ ಹರಾಜಿನಲ್ಲಿ ಚೇತೇಶ್ವರ ಪೂಜಾರ ಅವರ ಮೂಲ ಬೆಲೆ 50 ಲಕ್ಷಕ್ಕೆ CSK ಖರೀದಿಸಿತು. ಆದರೂ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಪೂಜಾರ ಈ ಹಿಂದೆ ಐಪಿಎಲ್‌ನಲ್ಲಿ ಕೆಕೆಆರ್, ಆರ್‌ಸಿಬಿ ಮತ್ತು ಪಿಬಿಕೆಎಸ್ ಪರ ಆಡಿದ್ದಾರೆ. ಎಂಟು ವರ್ಷಗಳ ಹಿಂದೆ 2014 ರಲ್ಲಿ ಅವರು ತಮ್ಮ ಅಂತಿಮ ಐಪಿಎಲ್ ಪಂದ್ಯವನ್ನು ಆಡಿದ್ದರು. ಪೂಜಾರ ಅವರ ಐಪಿಎಲ್ ಅಂಕಿಅಂಶಗಳಿಗೆ ಬಂದಾಗ, ಅವರು 30 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅರ್ಧಶತಕ ಸೇರಿದಂತೆ 390 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪೂಜಾರ ಅವರು ಮೆಗಾ ಹರಾಜಿನಲ್ಲಿ ಬಿಡ್ಡರ್‌ಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದರು.

ಹನುಮ ವಿಹಾರಿ
ಹನುಮ ವಿಹಾರಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ. ಅವರು ಆಡಿದ 24 ಐಪಿಎಲ್ ಪಂದ್ಯಗಳಲ್ಲಿ 284 ರನ್ ಗಳಿಸಿದ್ದಾರೆ. 2019 ರಲ್ಲಿ, ವಿಹಾರಿ ತಮ್ಮ ಅಂತಿಮ ಐಪಿಎಲ್ ಪಂದ್ಯ ಆಡಿದ್ದರು. 2022 ರ ಹರಾಜಿನಲ್ಲಿ, ಯಾವುದೇ ತಂಡವು ಅವರಿಗೆ ಬಿಡ್ ಮಾಡಲಿಲ್ಲ.

IPL 2023: ಹರಾಜಿನಲ್ಲಿ ದೊಡ್ಡ ಹೆಸರುಗಳು
ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರಾನ್, ಜೋ ರೂಟ್, ಕ್ಯಾಮೆರಾನ್ ಗ್ರೀನ್, ನಿಕೋಲಸ್ ಪೂರನ್ ಮತ್ತು ಇತರರು ಸೇರಿದಂತೆ ಕೆಲವು ಗಮನಾರ್ಹ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೇಧಾರ್ ಜಾಧವ್, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಹರಾಜಿನಲ್ಲಿ ಭಾರತದ ಹೆಸರು ಮಾಡಿದ ಆಟಗಾರರಾಗಿದ್ದು, ಅವರು ಹೆಚ್ಚಿನ ಬಿಡ್‌ ಗಳನ್ನು ಸೆಳೆಯುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!