IPL 16ನೇ ಆವೃತ್ತಿಗೆ ಭರ್ಜರಿ ಸಿದ್ಧತೆ ಆರಂಭಿಸಿದ ಸನ್‌ ರೈಸರ್ಸ್:‌ ನೂತನ ಕೋಚ್‌ ನೇಮಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 2023ರ ಸೀಸನ್‌ಗೆ ಇನ್ನು ಕೆಲವು ತಿಂಗಳು ಬಾಕಿ ಇರುವಂತೆ ಸನ್‌ರೈಸರ್ಸ್ ಹೈದರಾಬಾದ್‌ ತಂಡ ದೊಡ್ಡಮಟ್ಟದ ಸಿದ್ಧತೆಗಳನ್ನು ನಡೆಸುತ್ತಿದೆ. ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಸ್ಥಾನದಿಂದ ಟಾಮ್ ಮೂಡಿಯನ್ನು ವಜಾಗೊಳಲಾಗಿದ್ದು, ಹೊಸ ಕೋಚ್‌ ಆಗಿ ಕ್ರಿಕೆಟ್‌ ದಂತಕತೆ ಬ್ರಿಯಾನ್ ಲಾರಾ ನೇಮಕಗೊಂಡಿದ್ದಾರೆ.
ಲಾರಾ ಕಳೆದ ಋತುವಿನಲ್ಲಿ ಸನ್‌ ರೈಸರ್ಸ್ ಪ್ರಾಂಚೈಸಿಯ ಕಾರ್ಯತಂತ್ರದ ಸಲಹೆಗಾರರಾಗಿ ಮತ್ತು ಬ್ಯಾಟಿಂಗ್ ತರಬೇತುದಾರರಾಗಿ ತಂಡದ ಭಾಗವಾಗಿದ್ದರು. ಟಿ 20 ತಂಡದ ಮುಖ್ಯ ತರಬೇತುದಾರರಾಗಿ ಇದು ಅವರ ಮೊದಲ ನಿಯೋಜನೆಯಾಗಿದೆ.
ಮೂಡಿ ಮತ್ತು ಸನ್‌ರೈಸರ್ಸ್‌ ಪರಸ್ಪರ ಒಪ್ಪಂದಕ್ಕೆ ಬರುವ ಮೂಲಕ ದೂರವಾಗಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 2023ರಲ್ಲಿ ಯುಎಇ ನಲ್ಲಿ ಪ್ರಾರಂಭವಾಗಲಿರುವ ILT20 ಟೂರ್ನಿಯ ಆರು ಫ್ರಾಂಚೈಸಿಗಳಲ್ಲಿ ಒಂದಾದ ಡೆಸರ್ಟ್ ವೈಪರ್ಸ್‌ನಲ್ಲಿ ಮೂಡಿ ಅವರನ್ನು ಇತ್ತೀಚೆಗೆ ಕ್ರಿಕೆಟ್ ನಿರ್ದೇಶಕರಾಗಿ ನೇಮಿಸಲಾಗಿದೆ.

2013 ರಿಂದ 2019ರವರೆಗೆ ಮೂಡಿ ಎಸ್‌ಆರ್‌ಹೆಚ್ ಕೋಚ್‌ ಆಗಿದ್ದ ವೇಳೆ ತಂಡವನ್ನು ಬಲಿಷ್ಠವಾಗಿ ರೂಪಿಸಿದ್ದರು. ಈ ವೇಳೆ ಮೂಡಿ ಕೋಚಿಂಗ್‌ನಲ್ಲಿ ಸನ್‌ರೈಸರ್ಸ್ ಐದು ಬಾರಿ ಪ್ಲೇಆಫ್ ತಲುಪಿ, 2016 ರಲ್ಲಿ ಐಪಿಎಲ್ ಚಾಂಪಿಯನ್‌ ಆಗಿದ್ದ ಸಾಧನೆ ಮಾಡಿತ್ತು.  2021 ರಲ್ಲಿ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಎಸ್‌ಆರ್‌ಎಚ್‌ ಮುಖ್ಯ ಕೋಚ್ ಆಗಿ ನೇಮಕವಾದಾಗ ಮೂಡಿ ಕ್ರಿಕೆಟ್ ನಿರ್ದೇಶಕರಾಗಿ ಮರಳಿದ್ದರು. 2021ರ ನಿರಾಶಾದಾಯಕ ಋತುವಿನ ನಂತರ ಟ್ರಾವಿಸ್‌ ಬೇಲಿಸ್ ಹುದ್ದೆ ತೊರೆದರು, ಆಗ ಫ್ರಾಂಚೈಸಿ ಮೂಡಿ ಅವರನ್ನು ಮತ್ತೆ ಮುಖ್ಯ ತರಬೇತುದಾರರನ್ನಾಗಿ ನೇಮಿಸಿತು, ಮೂಡಿ ಎರಡನೆಯ ಬಾರಿ ಹುದ್ದೆಯನ್ನು ಅಲಂಕರಿಸಿದರು.
ಆದರೆ ಮುಖ್ಯ ತರಬೇತುದಾರರಾಗಿ ಮೂಡಿ ಎರಡನೇ ಅವಧಿಯಲ್ಲಿ ಯಶಸ್ವಿಯಾಗಲಿಲ್ಲ.
2022 ರಲ್ಲಿ, ಸನ್‌ರೈಸರ್ಸ್ 10 ತಂಡಗಳ ಪಂದ್ಯಾವಳಿಯಲ್ಲಿ ಆರು ಗೆಲುವು ಮತ್ತು ಎಂಟು ಸೋಲುಗಳೊಂದಿಗೆ ಎಂಟನೇ ಸ್ಥಾನವನ್ನು ಗಳಿಸಿತು. ಕಳೆದ ಎರಡು ಋತುಗಳಲ್ಲಿ, ಸನ್‌ರೈಸರ್ಸ್ ಐಪಿಎಲ್‌ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡವಾಗಿತ್ತು. ಈ ಅವಧಿಯಲ್ಲಿ 28 ಪಂದ್ಯಗಳಲ್ಲಿ ಒಂಬತ್ತು ಗೆಲುವುಗಳು, 18 ಸೋಲುಗಳು ಮತ್ತು ಒಂದು ಟೈ ಸಾಧಿಸಿ ನಿರಾಶಾದಾಯಕ ಪ್ರದರ್ಶನ ತೋರಿದೆ. ಈ ಹಿನ್ನೆಲೆಯಲ್ಲಿ ಸನ್‌ ರೈಸರ್‌ ಈ ಬಾರಿ ಬಲಿಷ್ಠ ವಾಗಿ ಕಂಬ್ಯಾಕ್‌ ಮಾಡಲು ಆಲೋಚಿಸುತ್ತಿದ್ದು ಈ ಹಿನ್ನೆಲೆಯಲ್ಲಿ ತಂಡದ ಕೋಚ್‌ ತಲೆದಂಡವಾಗಿದೆ. ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಕೋಚ್​ಗಳನ್ನು ಬದಲಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!