IPL -2024 | ಪಂಜಾಬ್​ ಕಿಂಗ್ಸ್​ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಐಪಿಎಲ್ ನಲ್ಲಿ ಇಂದು ರಾಜಸ್ಥಾನ ರಾಯಲ್ಸ್​ ಹಾಗೂ ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಶಿಖರ್ ಧವನ್​ ಪಡೆ ಫ್ಲೇಆಪ್ ಅವಕಾಶ ವೃದ್ದಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರೆ ಸಂಜು ಸ್ಯಾಮ್ಸನ್​ ಬಳಗ ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿವೆ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ ರಾಯಲ್ಸ್​ ಹಿಂದಿನ ಪಂದ್ಯಗಳನ್ನು ಗುಜರಾತ್ ಟೈಟಾನ್ಸ್​ ವಿರುದ್ಧ ಸೋಲು ಕಂಡಿತ್ತುಹೀಗಾಗಿ ಮತ್ತೆ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ.

ಕಳೆದ ಆರು ಆವೃತ್ತಿಗಳಲ್ಲಿ ಕೇವಲ ಎರಡು ಬಾರಿ ಪ್ಲೇಆಪ್​ಗೆ ಪಡೆದಿರುವ ಪಂಜಾಬ್ ಕಿಂಗ್ಸ್ ಅಸ್ಥಿರ ನಿರ್ವಹಣೆಯಿಂದ ಟೂರ್ನಿಯಲ್ಲಿ ಹೆಚ್ಚು ವೈಫಲ್ಯ ಕಂಡಿದೆ. ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು 3 ಸೋಲಿನೊಂದಿಗೆ 4 ಅಂಕ ಕಲೆಹಾಕಿದ್ದು ಜಯದ ಒತ್ತಡದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!