ಐಪಿಎಲ್​: ತಂಡದ ಅಧಿಕೃತ ಹೆಸರನ್ನು ಖಚಿತಪಡಿಸಿದ ಅಹ್ಮದಾಬಾದ್​ ಫ್ರಾಂಚೈಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ಬಾರಿಯ ಐಪಿಎಲ್​ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್​ ಫ್ರಾಂಚೈಸಿ ಇಂದು ತಮ್ಮ ತಂಡಕ್ಕೆ ಅಧಿಕೃತ ಹೆಸರನ್ನು ಖಚಿತಪಡಿಸಿದ್ದು, ಇನ್ನು ‘ಅಹ್ಮದಾಬಾದ್​ ಟೈಟನ್ಸ್’​ ಎಂದು ಕರೆಯಲ್ಪಡುತ್ತದೆ.
ಅಕ್ಟೋಬರ್​ನಲ್ಲಿ ನಡೆದ ಬಿಡ್​​ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹ್ಮದಾಬಾದ್​ ಫ್ರಾಂಚೈಸಿಯನ್ನು ಬರೋಬರಿ 5625 ಕೋಟಿ ರೂ. ನೀಡಿ ಖರೀದಿಸಿತ್ತು.
ಈಗಾಗಲೇ ತಂಡಕ್ಕೆ ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಆಫ್ಘಾನಿಸ್ತಾನ ಸ್ಪಿನ್ನರ್​ ರಶೀದ್ ಖಾನ್ ಮತ್ತು ಭಾರತದ ಶುಬ್ಮನ್​ ಗಿಲ್​ರನ್ನು ನೇರ ಡ್ರಾಫ್ಟ್​ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.
ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್​ ಎಂದು ನಾಮಕರಣ ಮಾಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!