ಕಾಲೇಜು ಆವರಣದಲ್ಲಿ ಯಾರು ಕೂಡ ಹಿಜಾಬ್, ಕೇಸರಿ ಶಾಲು ಧರಿಸುವಂತಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಲೇಜು ಆವರಣದಲ್ಲಿ ಯಾರು ಕೂಡ ಹಿಜಾಬ್, ಕೇಸರಿ ಶಾಲು ಧರಿಸುವಂತಿಲ್ಲ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನಗರದಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಲೇಜು ಅಡಳಿತ ಮಂಡಳಿ ನಿರ್ಧಾರ ಮಾಡಿರುವ ಸಮವಸ್ತ್ರವನ್ನೇ ಕಾಲೇಜಿನಲ್ಲಿ ಧರಿಸಬೇಕು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಆದೇಶ ಹೊರಡಿಸಿದ್ದು, ಇದನ್ನು ಎಲ್ಲರೂ ಪಾಲನೆ ಮಾಡಬೇಕು ಅಂತ ಹೇಳಿದರು.
ಧರ್ಮವನ್ನು ಮೀರಿ ಭಾರತ ಮಾತೆಯ ಮಕ್ಕಳು ಎನ್ನುವ ಮನೋಭಾವನೆಯನ್ನು ಮಕ್ಕಳಲ್ಲಿ ನಾವು ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯೂನಿಫಾರಂ ಸಮಾನತೆಯ ಸಂಕೇತ ಶಾಲಾ ಕಾಲೇಜುಗಳಲ್ಲಿ ಸಮಾನತೆ ಸಾರುವ ಕೆಲಸ ಆಗಬೇಕು ಅಂತ ಅವರು ಮನವಿ ಮಾಡಿಕೊಂಡರು.
ಈ ಹಿಂದೆ ಹಿಜಾಬ್‌ಗೆ ಧರಿಸುವಿಕೆ ಬಗ್ಗೆ ಈ ಮಟ್ಟಿನ ಒಲವು ಇರಿಲಿಲ್ಲ, ಈಗ ಮಕ್ಕಳು ಕಡ್ಡಾಯವಾಗಿ ನಾವು ಹಿಜಾಬ್ ಧರಿಸಿ ಬರುತ್ತೇನೆ ಅಂತ ಹೇಳುತ್ತಿರುವುದು ಅನುಮಾನಿಗಳಿಗೆ ಕಾರಣವಾಗಿದೇ, ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕಂಡು ಹಿಡಿಯುವ ಸಲುವಾಗಿ ತನಿಖೆ ನಡೆಸಲು ಪೋಲಿಸರಿಗೆ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!