ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಎಲ್ ಮೆಗಾ ಹರಾಜು ಭರ್ಜರಿಯಾಗಿ ನಡೆಯುತ್ತಿದ್ದು , ಈ ನಡುವೆಯೇ ರವಿಚಂದ್ರನ್ ಅಶ್ವಿನ್ ಅವರು ಮತ್ತೆ ತವರಿನ ಟೀಮ್ಗೆ ಎಂಟ್ರಿ ಆಗಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರು ಈ ಮೊದಲು ಅಶ್ವಿನ್ ಅವರು ಚೆನ್ನೈ ಟೀಮ್ನಲ್ಲಿದ್ದರು. ಆದರೆ 2022ರಲ್ಲಿ ಇವರನ್ನು ಕೈ ಬಿಡಲಾಗಿತ್ತು. ಹೀಗಾಗಿ ರಾಜಸ್ಥಾನ ತಂಡದಲ್ಲಿ ಆಡುತ್ತಿದ್ದರು. ಈ ಬಾರಿ ರಾಜಸ್ಥಾನ್ ತಂಡ ಹೊರಗಿಟ್ಟ ಕಾರಣ ಅವರು ಮತ್ತೆ ಹರಾಜಿಗೆ ಬಂದಿದ್ದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಮಟ್ಟದಲ್ಲಿ ಹರಾಜು ಮಾಡಿದ್ದು ಒಟ್ಟು 9.75 ಕೋಟಿ ರೂಪಾಯಿಗಳನ್ನು ನೀಡಿ ಆರ್.ಅಶ್ವಿನ್ ಅವರನ್ನ ಖರೀದಿ ಮಾಡಿದೆ.
ಮ್ಯಾಕ್ಸ್‌ವೆಲ್ ಪಂಜಾಬ್ ಪಾಲು
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಲೀಸ್ ಮಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಪಂಜಾಬ್ ತಂಡದ ಪಾಲಾಗಿದ್ದಾರೆ. ಪಂಜಾಬ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಮ್ಯಾಕ್ಸಿ ಖರೀದಿಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಪಂಜಾಬ್ ಕಿಂಗ್ಸ್ 4.20 ಕೋಟಿ ನೀಡಿ ಮ್ಯಾಕ್ಸಿ ಅವರನ್ನು ಖರೀದಿಸಿದೆ.
2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್ 2024ರ ಐಪಿಎಲ್‌ನಲ್ಲಿ ಕೇವಲ 52 ರನ್ ಗಳಸಿದರು.