ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 2025 ಮೆಗಾ ಹರಾಜು ಪ್ರಾರಂಭವಾಗಿದ್ದು, ಇಂದು ಮತ್ತು ನಾಳೆ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಯಜುವೇಂದ್ರ ಚಹಾಲ್ ಈ ಸಲ ಒಳ್ಳೆ ದುಡ್ಡನ್ನು ಕಮಾಯಿ ಮಾಡಿದ್ದಾರೆ.
ಯಜುವೇಂದ್ರ ಚಹಾಲ್ ಖರೀದಿ ಮಾಡಲು ಆರ್ಸಿಬಿ, ಹೈದ್ರಾಬಾದ್, ಪಂಜಾಬ್ ಸೇರಿ ಭರ್ಜರಿ ಹರಾಜು ಕೂಗಿದವು. 8 ಕೋಟಿ ರೂಪಾಯಿಗೆ ಪಂಜಾಬ್ ಹರಾಜು ಕರೆಯಿತು. ಈ ಮೂಲಕ ಪಂಜಾಬ್ ನತ್ತ ಮುಖಮಾಡಿದರು.
ಆಸ್ಟ್ರೇಲಿಯಾ ಮೂಲದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಿಚೆಲ್ ಸ್ಟಾರ್ಕ್ ಅವರನ್ನು ಡೆಲ್ಲಿ ಫ್ರಾಂಚೈಸಿಯು 11.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.