ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೆಗಾ ಹರಾಜು ನಡೆಯುತ್ತಿದೆ. ಮೆಗಾ ಹರಾಜಿನಲ್ಲಿ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
ಮೆಗಾ ಆಕ್ಷನ್ಗೆ ಮುನ್ನ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರ ಹಾಕಲಾಗಿತ್ತು. ಈಗ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಲಕ್ನೋ ತಂಡ ಒಂದೇ ಕಲ್ಲಿಗೆ ಮೂರು ಸ್ಲಾಟ್ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿ ಪಂತ್ ಅವರನ್ನು ಖರೀದಿಸಿದೆ. ಪಂತ್ಗಾಗಿ ಆರ್ಸಿಬಿ, ಲಕ್ನೋ, ಸನ್ರೈಸರ್ಸ್ ಹೈದರಾಬಾದ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು.