ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಹರಾಜು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಅನ್ನೋ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ಅಯ್ಯರ್ 26.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ಈ ಬಾರಿಯ ಹರಾಜಿನಲ್ಲಿ ಅಗ್ರೆಸ್ಸೀವ್ ಆಗಿ ಆಟಗಾರರ ಖರೀದಿ ಮಾಡುತ್ತಿದೆ. ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಖರೀದಿಸಿದೆ.
ಜೋಸ್ ಬಟ್ಲರ್ ಬರೋಬ್ಬರಿ 15.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಜೋಸ್ ಬಟ್ಲರ್ ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿತ್ತು. ಆದರೆ ಗಜುರಾತ್ ಟೈಟಾನ್ಸ್ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಬಾಡಗೆ 10.75 ಕೋಟಿ
ಮೊದಲ ಖರೀದಿಯಲ್ಲಿ ಸೌತ್ ಆಫ್ರಿಕಾ ವೇಗಿ ಕಗಿಸೋ ರಬಾಡಗೆ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.
ಆರ್‌ಸಿಬಿ 10 ಕೋಟಿ ರೂಪಾಯಿವರೆಗೂ ಬಿಡ್ ಮಾಡಿತ್ತು. ಬಳಿಕ ಮೊತ್ತ ಹೆಚ್ಚಾಗುತ್ತಿದ್ದಂತೆ ಬಿಡ್‌ನಿಂದ ಹಿಂದೆ ಸರಿಯಿತು. ಆದರೆ ಪಟ್ಟು ಬಿಡದ ಗುಜರಾತ್ ಟೈಟಾನ್ಸ್ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಈ ಮೂಲಕ ಗುಜರಾತ್ ಬಲಿಷ್ಠ ಹಾಗೂ ಉತ್ತಮ ಬೌಲರನ್ನು ತಂಡಕ್ಕೆ ಸೇರಿಸಿಕೊಂಡಿದೆ. 2 ಕೋಟಿ ರೂಪಾಯಿ ಮೂಲ ಬೆಲೆಯ ಕಗಿಸೋ ರಬಾಡ ಇದೀಗ ಬರೋಬ್ಬರಿ 10.75 ಕೋಟಿ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.