ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೆಗಾ ಹರಾಜು ನಡೆಯುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ಬರೋಬ್ಬರಿ 10 ಕೋಟಿ ನೀಡಿ ಸನ್ರೈಸರ್ಸ್ ಹೈದರಾಬಾದ್ ಖರೀದಿ ಮಾಡಿದೆ.
ಕಳೆದ ವರ್ಷ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಟೈಟನ್ಸ್ ಇತ್ತೀಚೆಗೆ ರಿಲೀಸ್ ಮಾಡಿತ್ತು. ಗಾಯದಿಂದ ಚೇತರಿಸಿಕೊಂಡ ಶಮಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು.
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಶಮಿಗಾಗಿ ಎಲ್ಲಾ ತಂಡಗಳು ಪೈಪೋಟಿಗೆ ಇಳಿದವು. ಕೆಕೆಆರ್, ಸನ್ರೈಸರ್ಸ್, ಚೆನ್ನೈ ಮಧ್ಯೆ ಭರ್ಜರಿ ಪೈಪೋಟಿ ನಡೆಯಿತು. ಕೊನೆಗೂ ಶಮಿ ಹೈದರಾಬಾದ್ ಪಾಲಾದರು.