IPL | ವಿರಾಟ್ ಕೊಹ್ಲಿ ಈ ಬಾರಿ IPL ಆಡೋದು ಡೌಟ್, ಇದು ನಿಜಾನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ನಿರ್ಗಮಿಸಿದ ನಂತರ ಸಾರ್ವಜನಿಕವಾಗಿ ಎಲ್ಲೊ ಕೂಡ ಕಾಣಿಸಿಕೊಂಡಿಲ್ಲ.ಲಂಡನ್‌ನ ರೆಸ್ಟೋರೆಂಟ್‌ನಲ್ಲಿ ಮಗಳು ವಮಿಕಾ ಜೊತೆ ಕೊಹ್ಲಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಕೊಹ್ಲಿ ಲಂಡನ್‌ನಲ್ಲಿಯೇ ಇದ್ದಾರೆ ಎಂಬುದು ದೃಢಪಟ್ಟಿದೆ.

ಸದ್ಯ ಅಭಿಮಾನಿಗಳ ಮನದಲ್ಲಿ ಇರುವುದು ಒಂದೇ ಪ್ರಶ್ನೆ. ಈ ಬಾರಿ ನಡೆಯಲಿರುವ ಐಪಿಎಲ್ ನಲ್ಲಿ ತಮ್ಮ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಆಡ್ತಾರಾ, ಇಲ್ವಾ? ಅನ್ನೋ ಪ್ರಶ್ನೆ ಮನೆ ಮಾಡಿದೆ.

IPL ಸೀಸನ್ 17 ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ವರ್ಷದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯವನ್ನು ಎದುರಿಸಲಿದೆ. ಆದರೆ RCB ಅಭಿಮಾನಿಗಳು IPL ಬಗ್ಗೆ ಉತ್ಸುಕತೆಗಿಂತ ಹೆಚ್ಚು ಚಿಂತಿತರಾಗಿದ್ದಾರೆ. ಕಿಂಗ್ ಕೊಹ್ಲಿ ಐಪಿಎಲ್ ನಲ್ಲಿ ಆಡುತ್ತಾರಾ? ಇಲ್ವಾ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!