September 11, 2026
Friday, September 11, 2026
spot_img

ಐಪಿಎಲ್ ಫೈನಲ್ ಅಹಮದಾಬಾದ್‌ಗೆ ಸ್ಥಳಾಂತರ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಬಿಸಿಸಿಐ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಹಮದಾಬಾದ್‌ಗೆ ಸ್ಥಳಾಂತರಗೊಳಿಸಿದೆ. ಇತ್ತ ಐಪಿಎಲ್ ಫೈನಲ್​ಗೆ ಸಕಲ ಸಿದ್ಧತೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಈ ನಿರ್ಧಾರ ನಿರಾಸೆ ಮೂಡಿಸಿದೆ.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಕೆಎಸ್​​ಸಿಎ, ಇಂತಹ ಮಹತ್ವದ ಪಂದ್ಯಗಳ ಆಯೋಜನೆಗೆ ಸಂಪೂರ್ಣ ಸಿದ್ಧತೆಯಲ್ಲಿದ್ದರೂ, ಬಿಸಿಸಿಐ ನಿರ್ಧಾರ ಕೈಗೊಂಡಿರುವುದನ್ನು ನಾವು ಅರಿತುಕೊಂಡಿದ್ದೇವೆ. ಈ ನಿರ್ಧಾರದ ಸೂಕ್ತ ಕಾರಣ ನಮಗೆ ತಿಳಿಸದಿದ್ದರೂ, ನಾವು ಬಿಸಿಸಿಐ ತೆಗೆದುಕೊಂಡ ತೀರ್ಮಾನವನ್ನು ಗೌರವಿಸುತ್ತೇವೆ ಎಂದು ತಿಳಿಸಿದೆ.

ಮುಂದಿನ ದಿನಗಳಲ್ಲೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸದಾ ಸಿದ್ಧವಾಗಿದ್ದು, ಬಿಸಿಸಿಐ, ಫ್ರಾಂಚೈಸಿಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ಮುಂದುವರಿಸಲಿದೆ. ಈ ಸಂದರ್ಭ ನಮಗೆ ಬೆಂಬಲ ನೀಡಿದ ಮಾಧ್ಯಮ ವಲಯ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !