ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ ಆರಂಭಕ್ಕೆ ಇನ್ನೇನು ಕೇವಲ ಎರಡು ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಮಂಡಳಿ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದು, ಟಿಕೆಟ್ ಮಾರಾಟವೂ ಸಹ ಆರಂಭವಾಗಿದೆ.
ಮಾರ್ಚ್ 26ರಿಂದ ಮಹಾರಾಷ್ಟ್ರದ ನಾಲ್ಕು ಮೈದಾನಗಳಲ್ಲಿ ಐಪಿಎಲ್ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಟ ನಡೆಸಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ.
ಪಂದ್ಯ ವೀಕ್ಷಣೆ ಮಾಡಲು www.iplt20.com ಅಥವಾ www.BookMyShow.com ಮೂಲಕ ಟಿಕೆಟ್ ಖರೀದಿ ಮಾಡಬಹುದಾಗಿದೆ. ಆದರೆ, ಓರ್ವ ವ್ಯಕ್ತಿ ಒಂದು ಟಿಕೆಟ್ ಖರೀದಿ ಮಾಡಲು ಅನುಮತಿ ನೀಡಲಾಗಿದೆ.
ಪಂದ್ಯ ವೀಕ್ಷಣೆ ಮಾಡಲು ತೆರಳುವ ಪ್ರೇಕ್ಷಕರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ವ್ಯಾಕ್ಸಿನ್ ಪಡೆದುಕೊಂಡಿರುವ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಪಂದ್ಯ ವೀಕ್ಷಣೆ ಮಾಡಲು ತೆರಳುವ ಪ್ರೇಕ್ಷಕರು ಒಂದೊಂದು ಮೈದಾನದಲ್ಲಿ ವಿಭಿನ್ನ ದರ ನೀಡಿ, ಟಿಕೆಟ್ ಖರೀದಿ ಮಾಡಬೇಕಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2,500 ರಿಂದ 4,000 ರೂ. ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 3000 ರೂನಿಂದ 3,500 ರೂ ಇದೆ. ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800 ರೂನಿಂದ 2,500ರೂವರಗೆ ಇದೆ. ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800ರೂದಿಂದ 2,500 ರೂವರೆಗೆ ಇದ್ದು, ಪುಣೆಯಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ 1,000 ರುಪಾಯಿಗಳಿಂದ 8,000 ರುಪಾಯಿಗಳವರೆಗಿನ ಟಿಕೆಟ್ ಲಭ್ಯವಿವೆ.