ಐಪಿಎಲ್ ಮಿನಿ ಹರಾಜು: ಕೋಟಿ ಕೋಟಿ ಗೆ ಸೇಲ್ ಆದ್ರೂ ಇವರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಪಿಎಲ್ ಮಿನಿ ಹರಾಜು ಈ ಹಿಂದಿನ ಎಲ್ಲಾ ಹರಾಜಿನ ದಾಖಲೆಗಳು ಪುಡಿ ಪುಡಿಯಾಗಿಸಿದ್ದು, ಭಾರೀ ಮೊತ್ತಕ್ಕೆ ಆಟಗಾರರರು ಸೇಲ್ ಆಗಿದ್ದಾರೆ .

ಮಿನಿ ಹರಾಜು ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಸ್ಯಾಮ್ ಕುರ್ರನ್ ಬರೋಬ್ಬರಿ 18.50 ಕೋಟಿ ರೂಪಾಯಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಗೆ ಮಾರಾಟವಾಗುವ ಮೂಲಕ ದಾಖಲೆ ಬರೆದರು.

ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ 17.50 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾದರು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ದಾಖಲೆಯಾಗಿದೆ.

ಇತರೆ ಅಧಿಕ ಮೊತ್ತಕ್ಕೆ ಸೇಲ್ ಆದ ಕ್ರಿಕೆಟಿಗರು
ಸ್ಯಾಮ್ ಕುರ್ರನ್: 18.50 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್ ತಂಡ ಖರೀದಿ
ಕ್ಯಾಮರೂನ್ ಗ್ರೀನ್: 17.50 ಕೋಟಿ ರೂಪಾಯಿ, ಮುಂಬೈ ಇಂಡಿಯನ್ಸ್ ತಂಡ ಖರೀದಿ
ಬೆನ್ ಸ್ಟೋಕ್ಸ್; 16.25 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ
ನಿಕೋಲಸ್ ಪೂರನ್: 16 ಕೋಟಿ ರೂಪಾಯಿ, ಲಖನೌ ಸೂಪರ್ ಜೈಂಟ್ಸ್ ತಂಡ ಖರೀದಿ
ಹ್ಯಾರಿ ಬ್ರೂಕ್: 13.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್
ಮಯಾಂಕ್ ಅಗರ್ವಾಲ್; 8.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್
ಶಿವಂ ಮಾವಿ; 6 ಕೋಟಿ ರೂಪಾಯಿ, ಗುಜರಾತ್ ಟೈಟಾನ್ಸ್
ಜೇಸನ್ ಹೋಲ್ಡರ್; 5.75 ಕೋಟಿ ರೂಪಾಯಿ, ರಾಜಸ್ಥಾನ ರಾಯಲ್ಸ್
ಮುಕೇಶ್ ಕುಮಾರ್; 5.5 ಕೋಟಿ ರೂಪಾಯಿ, ಡೆಲ್ಲಿ ಕ್ಯಾಪಿಟಲ್ಸ್
ಹೆನ್ರಿಚ್ ಕ್ಲಾಸೆನ್, 5.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!