ಕೆಕೆಆರ್‌ ತಂಡಸೇರಿದ ಆರೋನ್‌ ಫಿಂಚ್‌:‌ ಅಲೆಕ್ಸ್‌ ಹೇಲ್ಸ್ ಬದಲು ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬೆಂಗಳೂರಿನಲ್ಲಿ ನಡೆದ ಹರಾಜಿನಲ್ಲಿ ಕೊಲ್ಕತ್ತಾ ಪ್ರಾಂಚೈಸಿ ಸೇರ್ಪಡೆಯಾಗಿದ್ದ ಇಂಗ್ಲೆಂಡ್ ನ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ 2022 ರ ಐಪಿಎಲ್ ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೆಕೆಆರ್‌ ಬದಲಿ ಆಟಗಾರನ ಘೋಷಣೆ ಮಾಡಿದೆ. ಆಸ್ಟ್ರೇಲಿಯಾ ತಂಡದ ಏಕದಿನ ಹಾಗೂ ಟಿ20 ನಾಯಕ ಆರೋನ್ ಫಿಂಚ್ ಇದೀಗ ಕೆಕೆಆರ್‌ ಸೇರ್ಪಡೆಯಾಗಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಆಸೀಸ್‌ ನಾಯಕ ಪಿಂಚ್‌ ಗೆ ಕೆಕೆಆರ್‌ 9ನೇ ಪ್ರಾಂಚೈಸಿ!. ಫಿಂಚ್‌ ಆರ್ಸಿಬಿ, ಮುಂಬೈ, ಡೆಲ್ಲಿ, ಪುಣೆ, ಪಂಜಾಬ್, ರಾಜಸ್ತಾನ, ಹೈದರಾಬಾದ್, ಗುಜರಾತ್‌ ಲಯನ್ಸ್‌ ಪ್ರಾಂಚೈಸಿಗಳ ಪರ ಆಡಿದ್ದಾರೆ. ಈ ಮೂಲಕ ಫಿಂಚ್‌ ಐಪಿಎಲ್‌ ನಲ್ಲಿ ಅತಿಹೆಚ್ಚು ತಂಡಗಳ ಪರ ಆಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅಷ್ಟಾಗ್ಯೂ ಐಪಿಎಲ್‌ ನಲ್ಲಿ ಫಿಂಚ್‌ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ೨೦೨೦ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಫಿಂಚ್, 12 ಪಂದ್ಯಗಳಿಂದ 22.33ರ ಸರಾಸರಿಯಲ್ಲಿ ಕೇವಲ 268 ರನ್ ಬಾರಿಸಿ ಕಳಪೆ ನಿರ್ವಹಣೆ ತೋರಿದ್ದರು.
ಹೇಲ್ಸ್‌ ಈ ವರ್ಷ ಬಿಗ್ ಬ್ಯಾಷ್ ಲೀಗ್‌, ಬಿಬಿಎಲ್ , ಪಿಎಸ್‌ ಎಲ್‌ ಟೂರ್ನಿಗಳಲ್ಲಿ ಸತತವಾಗಿ ಆಡಿದ್ದರು. ನಿರಂತರ ಟೂರ್ನಿಗಳಿಂದ ನಾನು ಬಯೋಬಬಲ್‌ ಆಯಾಸದಿಂದ ಬಳಲಿದ್ದೇನೆ. ತಂಡದಲ್ಲಿದ್ದೂ ಉತ್ತಮ ಪ್ರದರ್ಶನ ನೀಡಲಾಗದಿದ್ದರೆ ಅದು ನ್ಯಾಯಸಮ್ಮತವಲ್ಲ. ಆದ್ದರಿಂದ ತಂಡ ತೊರೆಯುತ್ತಿದ್ದೇನೆ. ಕೋಚ್‌ ಮೆಕ್ಕಲಂ, ನಾಯಕ ಶ್ರೇಯಸ್ ಗೆ ಶುಭ ಹಾರೈಸುತ್ತೇನೆ. ಭವಿಷ್ಯದ ದಿನಗಳಲ್ಲಿ ಮತ್ತೆ ಕೆಕೆಆರ್ ಪರ ಕಣಕ್ಕಿಳಿಯಲು ಬಯಸುತ್ತೇನೆ ಎಂದು ಹೇಲ್ಸ್‌ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!