ಮಾ.27 ರಿಂದ ಶುರುವಾಗುತ್ತಾ ಐಪಿಎಲ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಚ್ 27 ರಿಂದ ಈ ವರ್ಷದ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜಿಸುತ್ತಿದೆ. ಇದಕ್ಕೆ ಮೊದಲು ಏಪ್ರಿಲ್ ಮೊದಲ ವಾರದಲ್ಲಿ ಟೂರ್ನಿ ಆಯೋಜಿಸುವ ಯೋಚನೆ ಹೊಂದಲಾಗಿತ್ತು.
ಐಪಿಎಲ್ ಫ್ರಾಂಚೈಸಿ ಮಾಲಕರ ಜತೆಗಿನ ಸಮಾಲೋಚನೆಯಲ್ಲಿ ಬಿಸಿಸಿಐ ಮಾರ್ಚ್ 27 ಕ್ಕೆ ಟೂರ್ನಿ ಆರಂಭಿಸುವ ಕುರಿತಂತೆ ಮಾತುಕತೆ ನಡೆಸಿದೆ.
ಮಹಾರಾಷ್ಟ್ರದ ನಾಲ್ಕು ಕ್ರೀಡಾಂಗಣಗಳಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಾಧ್ಯವಾದಷ್ಟು ಪ್ರಯತ್ನ ನಡೆಸುತ್ತಿದೆ. ಕೋವಿಡ್ ಕಾರಣದಿಂದಾಗಿ ಅದು ಅಸಾಧ್ಯವಾದರೆ ಮಾತ್ರ ಯುಎಇಗೆ ಪಂದ್ಯಗಳನ್ನು ಸ್ಥಳಾಂತರಿಸಲಾಗುವುದು.
ಶ್ರೀಲಂಕಾ ಅಥವಾ ದ.ಆಫ್ರಿಕಾಕ್ಕೆ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವ ಸಾಧ್ಯತೆಗಳೂ ಇವೆ ಎಂದು ಈ ಮೊದಲು ವರದಿಯಾಗಿತ್ತಾದರೂ ಫ್ರಾಂಚೈಸಿಗಳು ಮಾತ್ರ ದುಬೈ, ಶಾರ್ಜಾ ಮತ್ತು ಅಬುಧಾಬಿಗಳೇ ಉತ್ತಮ ಎಂದು ಅಭಿಪ್ರಾಯಪಟ್ಟವು.
ಪುಣೆ ಮತ್ತು ಮುಂಬೈಗಳಲ್ಲಿ ಪಂದ್ಯ ನಡೆಸುವುದಕ್ಕೆ ಒತ್ತು ನೀಡಲಾಗಿದೆ. ಅನಿವಾರ್ಯವಾದರೆ ಮಾತ್ರ ಯುಎಇಯಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!