ಟಾಸ್‌ ಗೆದ್ದ ಆರ್ಸಿಬಿ ಬ್ಯಾಟಿಂಗ್‌ ಆಯ್ಕೆ; ಸನ್‌ ರೈಸರ್ಸ್‌ ತಂಡದಲ್ಲಿ 2 ಮಹತ್ವದ ಬದಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನ 54 ನೇ ಪಂದ್ಯದಲ್ಲಿ ಮಧ್ಯಾಹ್ನ ೩.೩೦ಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದೊಂದಿಗೆ ಮುಖಾಮುಖಿಯಾಗಲಿದೆ. ಈಗಾಗಲೇ ಟಾಸ್‌ ಪ್ರಕ್ರಿಯೆ ಮುಗಿದಿದ್ದು ಟಾಸ್‌ ಗೆದ್ದ ಅರ್ಸಿಬಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು ಗೆದ್ದವರು ಪ್ಲೇ ಆಫ್‌ ರೇಸ್‌ ನಲ್ಲಿ ಉಳಿದುಕೊಳ್ಳಲಿದ್ದಾರೆ. ಆರ್ಸಿಬಿ ಪ್ಲೇಯಿಂಗ್‌ 11 ನಲ್ಲಿ ಯಾವುದೇ ಬದಲಾವನೆ ಮಾಡಿಲ್ಲ. ಅತ್ತ ಸನ್‌ ರೈಸರ್ಸ್‌ ತಂಡವು ಎರಡು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಸೀನ್‌ ಅಬಾಟ್‌ ಹಾಗೂ ಶ್ರೇಯಸ್‌ ಗೋಪಾಲ್‌ ಬದಲಿಗೆ ಅಫ್ಘಾನಿಸ್ತಾನದ ಫಾರುಕ್‌ ಫಾರೂಖಿ ಹಾಗೂ ಜಗದೀಶ ಸುಚಿತ್‌ ಸ್ಥಾನ ಪಡೆದಿದ್ದಾರೆ.

ತಂಡಗಳ ಪ್ಲೇಯಿಂಗ್‌ 11 ಹೀಗಿದೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ಡಬ್ಲ್ಯು), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ಸಿ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ಡಬ್ಲ್ಯೂ), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಫಾರುಕ್ ಫಾರೂಕಿ, ಉಮ್ರಾನ್ ಮಲಿಕ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!