Wednesday, October 5, 2022

Latest Posts

ಐಪಿಎಲ್ ತಂಡದ ಮಾಲೀಕ ನನ್ನ ಕಪಾಳಕ್ಕೆ ಬಾರಿಸಿದ್ದಾರೆ: ರಾಸ್ ಟೇಲರ್ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮ್ಯಾನ್‌ ರಾಸ್ ಟೇಲರ್ ತಮ್ಮ ಆತ್ಮಚರಿತ್ರೆಯಲ್ಲಿ ಆಘಾತಕಾರಿ ಸಂಗತಿಯನ್ನ ಬಹಿರಂಗಪಡಿಸಿದ್ದಾರೆ.

‘ಬ್ಲ್ಯಾಕ್ & ವೈಟ್’ ಎಂಬ ಶೀರ್ಷಿಕೆಯ ಆತ್ಮಚರಿತ್ರೆಯಲ್ಲಿ ಟೇಲರ್, ತಮ್ಮ ಜೀವನದ ಕಹಿ ನೆನಪುಗಳನ್ನು ಬಿಚ್ಚಿತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರ್ಯಾಂಚೈಸ್ʼನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರಲ್ಲಿ ಒಬ್ಬರು ಪಂಜಾಬ್ ಕಿಂಗ್ಸ್ ವಿರುದ್ಧ ಚೇಸ್‌ನಲ್ಲಿ ಡಕ್‌ ಔಟಾದ ನಂತರ ಕಪಾಳಮೋಕ್ಷ ಮಾಡಿರೋದನ್ನ ನೆನಪಿಸಿಕೊಂಡಿದ್ದಾರೆ.

‘ನಾನೊಮ್ಮೆ ಡಕ್‌ ಔಟ್‌ ಆದಾಗ ತಂಡ, ಸಹಾಯಕ ಸಿಬ್ಬಂದಿ ಮತ್ತು ಮ್ಯಾನೇಜ್ಮೆಂಟ್ ಹೋಟೆಲ್‌ನ ಮೇಲಿನ ಮಹಡಿಯಲ್ಲಿರುವ ಬಾರ್ನಲ್ಲಿದ್ದರು. ಲಿಜ್ ಹರ್ಲಿ ವಾರ್ನಿಯೊಂದಿಗೆ ಅಲ್ಲಿದ್ದರು. ರಾಯಲ್ಸ್ ಮಾಲೀಕರಲ್ಲಿ ಒಬ್ಬರು ‘ರಾಸ್, ಡಕ್‌ ಔಟಾಗಲು ನಾವು ನಿಮಗೆ ಒಂದು ಮಿಲಿಯನ್ ಡಾಲರ್ ಪಾವತಿಸಲಿಲ್ಲ’ ಎಂದರು. ಇನ್ನು ನನ್ನ ಕಪಾಳಕ್ಕೆ ಮೂರು ಅಥವಾ ನಾಲ್ಕು ಬಾರಿ ಬಾರಿಸಿದ್ದಾರೆ’ ಎಂದು ಟೇಲರ್ ಬಹಿರಂಗಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!