Monday, October 3, 2022

Latest Posts

ಚಿಕಿತ್ಸೆಗೆ ಕ್ಲಿನಿಕ್​​ಗೆ ಬಂದ ಮಹಿಳೆ ಮೇಲೆ ವೈದ್ಯನಿಂದ ಅತ್ಯಾಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದ ಜೈಪುರದಲ್ಲಿ ಚಿಕಿತ್ಸೆಗೆ ಎಂದು ಕ್ಲಿನಿಕ್​​ಗೆ ಬಂದ ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಕಾಮುಕ ವೈದ್ಯ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಜೈಪುರದ ಕರ್ಧಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಚಿಕಿತ್ಸೆ ಪಡೆದುಕೊಳ್ಳಲು ಬಂದಿದ್ದ ತನಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿರುವ ವೈದ್ಯ ದುಷ್ಕೃತ್ಯವೆಸಗಿದ್ದಾರೆಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಹಿಳೆಗೆ ಪ್ರಜ್ಞೆ ಬಂದ ಬಳಿಕ ಮನೆಗೆ ತೆರಳಿ ಕುಟುಂಬಸ್ಥರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಜೂನ್​​ 27ರಂದು ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಕರ್ಧಾನಿ ಪೊಲೀಸ್ ಠಾಣಾಧಿಕಾರಿ ಬಿ.ಎಲ್ ಮೀನಾ ಅವರ ಪ್ರಕಾರ, ಸರ್ನಾ ಡುಂಗರ್​ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆ ಅನಾರೋಗ್ಯಕ್ಕೊಳಗಾಗಿದ್ದರು. ಮನೆ ಸಮೀಪದ ಖಾಸಗಿ ಕ್ಲಿನಿಕ್​​ಗೆ ಚಿಕಿತ್ಸೆ ಪಡೆದುಕೊಳ್ಳಲು ತೆರಳಿದ್ದರು. ವೈದ್ಯ ಕುಡಿಯಲು ತಂಪು ಪಾನೀಯ ನೀಡಿದ್ದಾರೆ. ಇದರ ಬೆನ್ನಲ್ಲೇ ಮಹಿಳೆ ಪ್ರಜ್ಞೆ ತಪ್ಪಿದ್ದು, ವೈದ್ಯ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!