IPL 2023: ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಸೇರಿದ ಆರ್​ಸಿಬಿ ಸ್ಟಾರ್‌ ವೇಗಿ​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್​ ಪ್ರಿಮಿಯರ್ ಲೀಗ್ (IPL) ಸೀಸನ್ 16ಕ್ಕೆ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಭರ್ಜರಿ ವ್ಯಾಪಾರವೊಂದು ನಡೆದಿದೆ. ಆರ್ಸಿಬಿ ಸ್ಟಾರ್‌ ವೇಗಿಗೆ ಗಾಳ ಹಾಕಿರುವ ಮುಂಬೈ ಇಂಡಿಯನ್ಸ್, ತಂಡಕ್ಕೆ ಸೇರಿಸಿಕೊಂಡಿದೆ. ಆಸ್ಟ್ರೇಲಿಯಾದ ಆರ್​ಸಿಬಿ ಎಡಗೈ ವೇಗಿ ಜೇಸನ್ ಬೆಹ್ರೆನ್​ಡಾರ್ಫ್ ಮುಂಬೈ ಇಂಡಿಯನ್ಸ್‌ ಸೇರಿದ್ದಾರೆ.
ಐಪಿಎಲ್ 2022 ರ ಆವೃತ್ತಿಯಲ್ಲಿ ಬೆಹ್ರೆನ್‌ಡಾರ್ಫ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಿದ್ದರು. ಋತುವಿನ ಹಿಂದಿನ ಹರಾಜಿನಲ್ಲಿ ಆರ್ಸಿಬಿ ಅವರನ್ನ 75 ಲಕ್ಷಕ್ಕೆ ಖರೀದಿಸಿತ್ತು. ಬೆಹ್ರೆನ್‌ಡಾರ್ಫ್ 2018 ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಆಡಿದ್ದರು.
ಬೆಹ್ರೆನ್‌ಡಾರ್ಫ್ ಈ ಹಿಂದೆ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2018ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಎಡಗೈ ವೇಗಿ ಆಸ್ಟ್ರೇಲಿಯಾಕ್ಕಾಗಿ 9 ಟಿ 20 ಪಂದ್ಯಗಳಲ್ಲಿ 4/21 ರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ 7 ವಿಕೆಟ್ ಪಡೆದಿದ್ದಾರೆ. ಇನ್ನು ಆರ್​ಸಿಬಿ ಬೆಹ್ರೆನ್​ಡಾರ್ಫ್ ಟ್ವಿಟರ್​ನಲ್ಲಿ ಬೆಸ್ಟ್ ಆಫ್ ಲಕ್ ಹೇಳಿ ಬೀಳ್ಕೊಟ್ಟಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ವೆಲ್​ಕಮ್ ಬ್ಯಾಕ್ ಎಂದು ಟ್ವಿಟರ್‌ ನಲ್ಲಿ ಸ್ವಾಗತಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!