Monday, August 15, 2022

Latest Posts

ಐಪಿಎಲ್ ಮೊದಲಾರ್ಧದ ಪಂದ್ಯಗಳಿಗೆ ಲಭ್ಯವಿಲ್ಲ ಮ್ಯಾಕ್ಸ್‌ವೆಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಟಾರ್ ಪ್ಲೇಯರ್ ಮ್ಯಾಕ್ಸ್‌ವೆಲ್ ಮುಂದಿನ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಡೇಟ್ ಹಾಗೂ ಮ್ಯಾಚ್‌ಗಳ ಡೇಟ್ ಕ್ಲಾಶ್‌ನಿಂದ ಕೆಲ ಪಂದ್ಯಗಳಿಂದ ಮ್ಯಾಕ್ಸ್‌ವೆಲ್ ದೂರ ಉಳಿಯಲಿದ್ದಾರೆ.
ಮುಂಬರುವ ಪಾಕಿಸ್ತಾನ ಪ್ರವಾಸ ಮತ್ತು ಮೊದಲಾರ್ಧದ ಕೆಲವು ಐಪಿಎಲ್ ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಲಭ್ಯವಿರೋದಿಲ್ಲ.

ಮದುವೆ ದಿನಾಂಕ ಹಾಗೂ ಪಂದ್ಯಗಳ ನಡುವೆ ಎರಡು ವಾರದ ಅಂತರ ಇತ್ತು. ಆದರೆ ರಾಷ್ಟ್ರೀಯ ತಂಡದ ವೇಳಾಪಟ್ಟಿ ಬದಲಾವಣೆ ಮಾಡಿದ್ದರಿಂದ ಪ್ರವಾಸದ ಅವಕಾಶ ತಪ್ಪಿದೆ. ಕೇಂದ್ರೀಯ ಒಪ್ಪಂದಕ್ಕೆ ನಾನು ಸಿಎ ಸಂಪರ್ಕಿಸಿದಾಗ ಪಾಕಿಸ್ತಾನ ಪ್ರವಾಸ ದಿನಾಂಕ ಬದಲಾಗಿರುವುದರ ಬಗ್ಗೆ ತಿಳಿಯಿತು. ಇದಕ್ಕೂ ಮುನ್ನವೇ ನನ್ನ ಮದುವೆ ದಿನಾಂಕ ನಿಗದಿಯಾಗಿತ್ತು ಎಂದು ಮ್ಯಾಕ್ಸ್‌ವೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಾ.27 ರಂದು ಮ್ಯಾಕ್ಸ್‌ವೆಲ್ ವಿವಾಹ ನಿಶ್ಚಯವಾಗಿದ್ದು, ಏ.2 ರಿಂದ ಐಪಿಎಲ್ ಆರಂಭವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss