Tuesday, May 30, 2023

Latest Posts

ರಾಜ್ಯ ರಾಜಧಾನಿಯಲ್ಲಿ ಐಪಿಎಲ್ ಹವಾ: ಈ ದಿನ ಮೆಟ್ರೊ ನೀಡುತ್ತೆ ತಡರಾತ್ರಿವರೆಗೂ ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿರುವುದರಿಂದ ಕ್ರಿಕೆಟ್ ಅಭಿಮಾನಿಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಏಪ್ರಿಲ್ ತಿಂಗಳ ಈ ದಿನಗಳಲ್ಲಿ ಮೆಟ್ರೊ ರೈಲು ಸಂಚಾರ ಸೇವೆಯ ಅವಧಿಯನ್ನು ವಿಸ್ತರಿಸಲಾಗಿದೆ.

ಏಪ್ರಿಲ್ 2, 10, 17, ಏಪ್ರಿಲ್ 26 ಮತ್ತು ಮೇ 21ರಂದು ಮೆಟ್ರೊ ರೈಲು ಸಂಚಾರವನ್ನು ತಡರಾತ್ರಿಯವರೆಗೆ ವಿಸ್ತರಿಸಲಾಗಿದೆ.

ಕೊನೆಯ ರೈಲು ಮೂಲ ನಿಲ್ದಾಣವನ್ನು ಮಧ್ಯರಾತ್ರಿ 1 ಗಂಟೆಗೆ ಹೊರಟು ಮೆಜೆಸ್ಟಿಕ್ ನಿಲ್ದಾಣವನ್ನು ಮಧ್ಯರಾತ್ರಿ 1.30ಕ್ಕೆ ತಲುಪಲಿದೆ. ಹಿಂತಿರುಗುವ ಟಿಕೆಟ್ ನ್ನು ಸಹ ಪ್ರಯಾಣಿಕರು ಮೊದಲೇ ಬುಕ್ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!