Tuesday, May 30, 2023

Latest Posts

SPORTS NEWS | ಕ್ರಿಕೆಟ್ ಹಬ್ಬ ಐಪಿಎಲ್ 2023ಕ್ಕೆ ಸಿಕ್ಕಿತು ವಿದ್ಯುಕ್ತ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವವನ್ನೇ ತನ್ನತ ಸೆಳೆಯುತ್ತಿರುವ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ 2023ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.

ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ಪ್ಲೇ ಬ್ಯಾಕ್ ಸಿಂಗ್ ಅರ್ಜಿತ್ ಹಾಡಿನೊಂದಿಗೆ ಒಪನಿಂಗ್ ಸೆರೆಮನಿ ಆರಂಭಗೊಂಡಿತು.

ವೇದಿಕೆಯಲ್ಲಿ ಅರ್ಜಿತ್ ಒಂದೊಂದೆ ಹಾಡಿನ ಮೂಲಕ ಜನರನ್ನು ರಂಜಿಸುತ್ತಿದ್ದರೆ, ಇತ್ತ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ ಜೋರಾಯಿತು.

ಅರ್ಜಿತ್ ಸಿಂಗ್ ಬಳಿಕ ನಟಿ ತಮನ್ನ ಭಾಟಿಯಾ ಅದ್ಭುತ ಡ್ಯಾನ್ಸ್ ಮನಸೂರೆಗೊಂಡಿತು. ಇನ್ನು ನಟಿ ರಶ್ಮಿಕಾ ಮಂದಣ್ಣ ಪುಷ್ಪಾ ಚಿತ್ರದ ಸಾಮಿ ಸಾಮಿ ಡ್ಯಾನ್ಸ್‌ನೊಂಂದಿಗೆ ಮತ್ತೆ ಅಭಿಮಾನಿಗಳಿಗಳ ಮೋಡಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜೀವ್ ಶುಕ್ಲಾ ಸೇರಿದಂತೆ ಬಿಸಿಸಿಐ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!