IPL | ವಿರಾಟ್​ ಕೊಹ್ಲಿ ಈ ಬಾರಿಯ ಐಪಿಎಲ್​ ಆಡ್ತಾರಾ? ಕೊನೆಗೂ ಸಿಕ್ಕೇ ಬಿಡ್ತು ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆಡುತ್ತಾರಾ? ಇಲ್ವಾ. ಈ ಪ್ರಶ್ನೆ ಇಷ್ಟು ದಿನ ಅಭಿಮಾನಿಗಳನ್ನು ಕಾಡುತ್ತಿತ್ತು. ಅಂತಿಮವಾಗಿ, ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಿಂಗ್ ಕೊಹ್ಲಿ ಕಮ್​ಬ್ಯಾಕ್​ಗೆ ಮಹೂರ್ತ ಫಿಕ್ಸ್​ ಆಗಿದೆ.

ವಿರಾಟ್ ಕೊಹ್ಲಿ ಯಾವಾಗ ಮರಳುತ್ತಾರೆ? ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ ಆಡುತ್ತಾರಾ? ಎಂಬ ಅಭಿಮಾನಿ ವಲಯದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ವಿರಾಟ್ ಕೊಹ್ಲಿ ಲಂಡನ್‌ನಿಂದ ಭಾರತಕ್ಕೆ ಬರಲು ಸಿದ್ಧರಾಗಿದ್ದು. ಕೊಹ್ಲಿ ಶೀಘ್ರದಲ್ಲೇ ಭಾರತಕ್ಕೆ ಬಂದು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಐಪಿಎಲ್ ಟೂರ್ನಿಗೆ ಆರ್‌ಸಿಬಿ ಫ್ರಾಂಚೈಸಿ ಸಿದ್ಧತೆ ಆರಂಭವಾಗಿದೆ. ಆಟಗಾರರು, ಸಪೋರ್ಟ್​ ಸ್ಟಾಫ್​ ಒಬ್ಬೊಬ್ಬರಾಗಿ ತಂಡವನ್ನು ಕೂಡಿಕೊಳ್ತಿದ್ದಾರೆ. ವಿರಾಟ್ ಕೊಹ್ಲಿ ಎಂಟ್ರಿ ಕೂಡ ಕನ್ಫರ್ಮ್ ಆಗಿದೆ. ಮಾರ್ಚ್ 16 ರಂದು ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!