ಕೇರಳಕ್ಕೆ ಮತ್ತೊಂದು ಶಾಕ್: ಮಕ್ಕಳಲ್ಲಿ ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ ‘ಮಂಪ್ಸ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಸಿಲಿ ಬೇಗೆಯಲ್ಲಿ ಬಳಲುತ್ತಿರುವ ಕೇರಳಕ್ಕೆ ಈಗ ಮತ್ತೊಂದು ಶಾಕ್ ನೀಡಿದೆ ಮಂಪ್ಸ್ (ಕೆಪ್ಪಟೆರಾಯ).
ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಾದ್ಯಂತ ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳಿಗೆ ಇದು ಬಾಧಿಸಿದೆ. ಜೊತೆಗೆ ವ್ಯಾಪಕವಾಗಿ ಹರಡುತ್ತಲೂ ಇದೆ.

ರಾಜ್ಯದಲ್ಲಿ ಹೊರ ರೋಗಿಗಳ ವಿಭಾಕ್ಕೆ ದಾಖಲಾಗುತ್ತಿರುವ ಪ್ರತೀ 20 ಮಕ್ಕಳಲ್ಲಿ ಒಬ್ಬರು ಈ ಕಾಯಿಲೆಯಲ್ಲಿ ಬಳಲುತ್ತಿದ್ದಾರೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಗಮನಸೆಳೆದಿದೆ. ಇನ್ನು ಮಲಪ್ಪುರಂ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ವ್ಯಾಪಕವಾಗಿ ಮಕ್ಕಳನ್ನು ಕಾಡುತ್ತಿದೆ ಎಂದು ಅದು ಬೊಟ್ಟು ಮಾಡಿದೆ.

ವರದಿಗಳ ಪ್ರಕಾರ, ಕಳೆದ ಆರು ದಿನಗಳಲ್ಲಿ 1649 ಮಕ್ಕಳು ಈ ಮಂಪ್ಸ್ ಸೋಂಕಿಗೆ ಒಳಗಾಗಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!