Thursday, June 30, 2022

Latest Posts

ಬಿಕಿನಿಯಲ್ಲಿ ಬರ್ತಡೇ ಸೆಲಬ್ರೇಷನ್ಸ್‌, ಟ್ರೋಲಿಗರಿಗೆ ಆಹಾರವಾದ ಸ್ಟಾರ್‌ ಹೀರೋ ಪುತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅವರ ಮಗಳು ಇರಾಖಾನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬಾಲಿವುಡ್‌ನಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಈ ಹಿಂದೆಯೂ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಮಾಧ್ಯಮವರ ಕೈಗೆ ಸಿಕ್ಕಿಬಿದ್ದಿದ್ರು. ಆದರೆ ಇತ್ತೀಚಿಗೆ ಇರಾಕಿನಲ್ಲಿ ಕುಟುಂಬದ ಜೊತೆ ಎಂಜಾಯ್‌ ಮಾಡ್ತಾ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಇದು ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಮೇ 8ರಂದು ಇರಾಖಾನ್ ಅವರ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಇರಾಕ್‌ನಲ್ಲಿ ಆಚರಿಸಿಕೊಂಡರು. ಕುಟುಂಬ ಸದಸ್ಯರ ಸಮ್ಮುಖದಲ್ಲೇ ಬಿಕಿನಿಯಲ್ಲಿ ಕೇಕ್ ಕತ್ತರಿಸಿ, ಆ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ ಮತ್ತು ಆಕೆಯ ಗೆಳೆಯ ನೂಪುರ್ ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವಿಚಾರವನ್ನೇ ನೆಟ್ಟಿಗರು ದೊಡ್ಡದಾಗಿ ಬಿಂಬಿಸಿದ್ದಾರೆ.

ಬಿಕಿನಿಯಲ್ಲಿ ಕೇಕ್ ಕತ್ತರಿಸುವುದು ಎಂದರೇನು? ಅದು ಕುಟುಂಬದ ಎದುರಿಗೇ? ಬಿಕಿನಿಯಲ್ಲಿ ಸಂಭ್ರಮಿಸಿದ್ದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹಂಚಿಕೊಳ್ಳಬೇಕೆ? ಎಂದು ಕಿಡಿ ಕಾರಿದ್ದಾರೆ. ಇನ್ನೂ ಕೆಲವರು ಹೆತ್ತವರಿಗಿಲ್ಲದ ಸಂಕಟ ನಿಮಗ್ಯಾಕೆ ಎಂದು ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss