Saturday, February 4, 2023

Latest Posts

ಹಿಜಾಬ್ ಪ್ರತಿಭಟನೆ ಬೆಂಬಲಿಸಿದ್ದಕ್ಕೆ ಪ್ರತಿಕಾರ: ಖ್ಯಾತ ನಿರ್ಮಾಪಕಗೆ ಗೋವಾ ಫಿಲ್ಮ್‌ ಫೆಸ್ಟ್‌ ನಲ್ಲಿ ಭಾಗಿಯಾಗದಂತೆ ತಡೆದ ಇರಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಜಾಬ್‌ ಧರಿಸುವುದನ್ನು ವಿರೋಧಿಸಿ ಇರಾನ್‌ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕ ರೆಜಾ ಡೋರ್ಮಿಶಿಯನ್ ಅವರು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಗೆ ಭೇಟಿ ನೀಡುವುದನ್ನು ನಿರ್ಬಂಧಿಸುವ ಮೂಲಕ ಇರಾನ್‌ ಸರ್ಕಾರ ಪ್ರತಿಕಾರ ತೀರಿಸಿಕೊಂಡಿದೆ.
ಗೋವಾ ಫಿಲ್ಮ್‌ ಫೆಸ್ಟ್‌ ನಲ್ಲಿ ರೆಜಾ ನಿರ್ಮಿಸಿದ ‘ಎ ಮೈನರ್’ ಚಲನಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಆಡಳಿತ ವಿರೋಧಿ ಹಾಗೂ ಹಿಜಾಬ್‌ ವಿರೋಧಿ ಅಭಿಪ್ರಾಯಗಳ ಅಭಿವ್ಯಕ್ತಿಯಿಂದಾಗಿ ಇರಾನ್ ಆಡಳಿತದಿಂದ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನಿನ ಚಲನಚಿತ್ರ ರಂಗದ ಇತ್ತೀಚಿನ ಪ್ರತಿನಿಧಿ ರೆಜಾ ಡೋರ್ಮಿಶಿಯನ್. ಇದಕ್ಕೂ ಮುನ್ನ ಇರಾನ್‌ ಹಲವಾರು ಚಿತ್ರ ನಿರ್ಮಾತೃಗಳ ವಿರುದ್ಧ ಇಂತಹದ್ದೇ ಪ್ರತಿಕಾರ ಕ್ರಮಗಳನ್ನು ಪ್ರದರ್ಶಿಸಿದೆ.

ಡಾರ್ಮಿಶಿಯನ್ ನಿರ್ಮಾಣದಲ್ಲಿ ದರಿಯುಷ್ ಮೆಹರ್ಜುಯಿ ನಿರ್ದೇಶಿಸಿದ್ದ ʼಎ ಮೈನರ್‌ʼ ಚಿತ್ರಕ್ಕಾಗಿ ಐಎಫ್‌ಎಫ್‌ಐ ಅವರನ್ನು ಆಹ್ವಾನಿಸಿತ್ತು. ಆದಾಗ್ಯೂ, ಅವರು ದೇಶವನ್ನು ತೊರೆಯಲು ಇರಾನ್ ಸರ್ಕಾರ  ಅನುಮತಿ ನೀಡಲಿಲ್ಲ. ಅವರ ಚಿತ್ರ ‘ಎ ಮೈನರ್’ ಗುರುವಾರ ಮತ್ತು ಶುಕ್ರವಾರ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ.
‘ಎ ಮೈನರ್’ ಚಿತ್ರವು ಸಂಗೀತ ಕಲಿಯಲು ಬಯಸುವ ಮುಕ್ತ ಚಿಂತನೆಯ ಮಗಳು ಹಾಗೂ ಸಂಪ್ರದಾಯವಾದಿ ಗಂಡನ ನಡುವೆ ನಲುಗುವ ಮಹಿಳೆಯ ಕಥೆಯನ್ನು ಹೊಂದಿದೆ. ಗೋವಾಕ್ಕೆ ಹೊರಟಿದ್ದ ಡಾರ್ಮಿಶಿಯನ್ ಅವರ ಪಾಸ್‌ಪೋರ್ಟ್ ಅನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಾರ್ಮಿಶಿಯನ್ ಈ ಸಂಬಂಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.  ಡಾರ್ಮಿಶಿಯನ್ ಅವರನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಳೆದ ಕೆಲವು ವಾರಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಇರಾನ್ ಸರ್ಕಾರದ ವಿರುದ್ಧ ಡಾರ್ಮಿಶಿಯನ್ ನಡೆಸಿದ್ದ ಟೀಕೆಗಳಿಗೆ ಈ ಕ್ರಮಗಳು ನೇರವಾಗಿ ಸಂಬಂಧಿಸಿವೆ ಎನ್ನಲಾಗಿದೆ ಇರಾನ್‌ನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಉದ್ದಕ್ಕೂ, ಗಮನಾರ್ಹ ಬೆಳವಣಿಗೆಗಳಿಗೆ ಬೆಂಬಲವನ್ನು ತೋರಿಸಲು ಡಾರ್ಮಿಶಿಯನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!