ಮೊರಾಕ್ಕೊ ವಿರುದ್ಧ ಸೋತ ಬೆಲ್ಜಿಯಂ: ಕೋಪೋದ್ರಿಕ್ತ ಅಭಿಮಾನಿಗಳಿಂದ ಹಿಂಸಾಚಾರ, ವಾಹನಗಳಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಅನುಭವಿಸಿದ ಹೀನಾಯ ಸೋಲು ಬೆಲ್ಜಿಯಂ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಕೋಪೋದ್ರಿಕ್ತ ಅಭಿಮಾನಿಗಳು ಬ್ರಸೆಲ್ಸ್‌ನಲ್ಲಿ ಕಾರು ಮತ್ತು ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ್ದು, ಬೆಲ್ಜಿಯಂ ಪೊಲೀಸರು ಈ ಸಂಬಂಧ 13 ಜನರನ್ನು ಬಂಧಿಸಿದ್ದಾರೆ.
ವಿಶ್ವಕಪ್‌ ನಲ್ಲಿ ಬೆಲ್ಜಿಯಂ ಸೋಲುತ್ತಿದ್ದಂತೆ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಗಲಭೆಗಳು ನಡೆದವು. ಅಲ್ಲಿ ಹಲವಾರು ಅಭಿಮಾನಿಗಳು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
“ಸಂಜೆ 7 ಗಂಟೆಯ ಸುಮಾರಿಗೆ ಶಾಂತತೆ ಮರಳಿತು ಮತ್ತು ಸಂಬಂಧಪಟ್ಟ ವಲಯಗಳಲ್ಲಿ ತಡೆಗಟ್ಟುವ ಗಸ್ತುಗಳು ಜಾರಿಯಲ್ಲಿವೆ” ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದರು.
“ಗಲಭೆಕೋರರು ಪೈರೋಟೆಕ್ನಿಕ್ ವಸ್ತುಗಳು, ಸ್ಪೋಟಕಗಳು, ಕೋಲುಗಳನ್ನು ಬಳಸಿದರು ಮತ್ತು ಸಾರ್ವಜನಿಕ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು” ಈ ವೇಳೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸ್ಫಟದಿಂದ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ. ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ನಡೆಸಿ ಗಲಭೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!