ಇರಾಕ್ ಮೇಲೆ ಇರಾನ್ ಕ್ಷಿಪಣಿ ಹೊಡೆದಿದೆ, ಏಕೆ ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯ-ಉಕ್ರೇನ್ ಸಂಘರ್ಷವೇ ಜಗತ್ತನ್ನು ದಿಕ್ಕೆಡಿಸಿರುವಾಗ, ಇದು ಸಾಲದೆಂಬಂತೆ ಭಾನುವಾರ ಮಧ್ಯಪ್ರಾಚ್ಯದಿಂದಲೂ ಸಂಘರ್ಷದ ಸುದ್ದಿ ಬಂದಿದೆ.

ಇರಾಕಿನ ಉತ್ತರಭಾಗದ ನಗರ ಎರ್ಬಿಲ್ ಎಂಬ ನಗರದ ಮೇಲೆ ಇರಾನ್ ಒಂದು ಡಜನ್ ಕ್ಷಿಪಣಿಗಳನ್ನು ಭಾನುವಾರ ಪ್ರಯೋಗಿಸಿದೆ. ಕುರ್ದ್ ಸಮುದಾಯದವರೇ ಹೆಚ್ಚಿರುವ ನಗರವನ್ನು ಇರಾನ್ ತನ್ನ ದಾಳಿಗೆ ಗುರಿಯಾಗಿಸಿಕೊಂಡಿದೆ.

ಇರಾನ್ ಪ್ರಯೋಗಿಸಿದ ಕ್ಷಿಪಣಿಗಳ ಪೈಕಿ ಒಂದು ಹೊಸದಾಗಿ ನಿರ್ಮಿತಗೊಂಡ ಅಮೆರಿಕ ರಾಯಭಾರ ಕಚೇರಿ ಬಳಿಯೇ ಬಿದ್ದಿದೆ. ಈ ಎಲ್ಲ ಕ್ಷಿಪಣಿ ದಾಳಿಗಳಿಂದ ಯಾವುದೇ ಜೀವನಷ್ಟವಾಗಿರದಿದ್ದರೂ ಕಟ್ಟಡಗಳಿಗೆ ಹಾನಿಯಾಗಿದೆ.

ಈ ವಾರ ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ತನ್ನ ಸೇನೆಯ ಇಬ್ಬರು ಮೃತರಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ದಾಳಿ ಗುರಿಗಳ ಪೈಕಿ ಇಸ್ರೇಲಿನ ಗೂಢಚಾರರಿಗೆ ಆಶ್ರಯ ನೀಡಿದ್ದ ಕಟ್ಟಡವೂ ಇತ್ತು ಎಂಬುದು ಇರಾನ್ ಅಂಬೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!