March 16, 2026
Monday, March 16, 2026
spot_img

Iran-Israel War | ತುರ್ತು ಮಿಲಿಟರಿ ಬಜೆಟ್‌ಗೆ ಇಸ್ರೇಲ್ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಇಸ್ರೇಲ್ ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್ ಡಾಲರ್‌ (ಸುಮಾರು 7,656 ಕೋಟಿ ರೂ.) ಮೊತ್ತದ ತುರ್ತು ಬಜೆಟ್‌ಗೆ ಅನುಮೋದನೆ ನೀಡಿದೆ.

ಕ್ಯಾಬಿನೆಟ್ ಸಭೆಯಲ್ಲಿ ಸುಮಾರು 2.6 ಶತಕೋಟಿ ಶೇಕೆಲ್ ಮೌಲ್ಯದ ಈ ಪ್ಯಾಕೇಜ್‌ಗೆ ಒಪ್ಪಿಗೆ ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಈ ಹೆಚ್ಚುವರಿ ನಿಧಿಯನ್ನು ಭದ್ರತಾ ಸಾಮಗ್ರಿಗಳ ಖರೀದಿ ಮತ್ತು ತುರ್ತು ಅಗತ್ಯಗಳಿಗೆ ಬಳಸಲಾಗುತ್ತದೆ. ಹೊಸ ಬಜೆಟ್‌ನೊಂದಿಗೆ ಇರಾನ್ ವಿರುದ್ಧ ಕನಿಷ್ಠ ಮೂರು ವಾರಗಳ ಸೈನಿಕ ಕಾರ್ಯಾಚರಣೆ ಮುಂದುವರಿಸಲು ಇಸ್ರೇಲ್ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

ಇದರ ನಡುವೆ ಇಸ್ರೇಲ್ ಪಡೆಗಳು ಪಶ್ಚಿಮ ಇರಾನ್ ಪ್ರದೇಶದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿ ಮಿಲಿಟರಿ ಹಾಗೂ ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡಿವೆ. ಆದರೆ ಈ ದಾಳಿಯಿಂದ ಸಂಭವಿಸಿದ ಹಾನಿ ಅಥವಾ ಸಾವಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !