October 15, 2026
Thursday, October 15, 2026
spot_img

ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್: ಕದನ ವಿರಾಮಕ್ಕೂ ಮುನ್ನ 10 ಬೇಡಿಕೆ ಇಟ್ಟ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಕದನ ಯಾಕೋ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅತ್ತ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದರೆ ಇತ್ತ ಇರಾನ್ ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ನಾವು ಯಾವುದೇ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿ ನೀಡಲ್ಲ. ಇದಕ್ಕೆ ಶಾಶ್ವತ ಅಂತ್ಯ ಹಾಡಬೇಕಾಗಿದೆ ಎಂದು ಇರಾನ್ ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ತನ್ನ ಉತ್ತರವನ್ನು ಕಳುಹಿಸಿದೆ.

ಇದೇ ವೇಳೆ ಇರಾನ್ ಅಮೆರಿಕ ಮುಂದೆ 10 ಅಂಶಗಳ ಬೇಡಿಕೆಯನ್ನು ಇಟ್ಟಿದ್ದು, ಮಧ್ಯಪ್ರಾಚ್ಯ ಸಂಘರ್ಷದ ಅಂತ್ಯ, ಹಾರ್ಮುಜ್ ಜಲಸಂಧಿ ಸುರಕ್ಷಿತ ಸಂಚಾರಕ್ಕೆ ಪ್ರತ್ಯೇಕ ಪ್ರೋಟೋಕಾಲ್ ,ಜೊತೆಗೆ ಯುದ್ಧದಿಂದಾಗಿ ನಾಶವಾಗಿದ್ದ ಪ್ರದೇಶಗಳ ಪುನರ್ನಿರ್ಮಾಣ ಎಂಬ ಪ್ರಮುಖ ಬೇಡಿಕೆಗಳನ್ನು ಇರಾನ್ ಇಟ್ಟಿದೆ.

Must Read