May 21, 2026
Thursday, May 21, 2026
spot_img

ಈ ಬಾರಿ ಬಂಗಾಳದಲ್ಲಿ ದೀದಿನಾ, ಮೋದಿನಾ?: ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳುತ್ತೆ?

ಪಂಚ ರಾಜ್ಯ ಚುನಾವಣೆಗಳಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ರಾಜ್ಯ ಪಶ್ಚಿಮ ಬಂಗಾಳ. ಈ ಬಾರಿ ಬಂಗಾಳದ ರಾಜಕೀಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆ ಪೂರ್ವ ಸಮೀಕ್ಷಾ ಫಲಿತಾಂಶ ಬಹಿರಂಗವಾಗಿದ್ದು, ಮ್ಯಾಟ್ರಿಜ್ ಹಾಗೂ ಚಾಣಾಕ್ಯ ಎಜೆನ್ಸಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ.

294 ಸ್ಥಾನ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ದೀದಿ ಸರಕಾರ ಕೊನೆಗೊಂಡು ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮ್ಯಾಟ್ರೈಜ್ ಸಮೀಕ್ಷೆ ಪ್ರಕಾರ 294 ಸ್ಥಾನಗಳಲ್ಲಿ ಟಿಎಂಸಿ 140 – 160 ಸೀಟು ಗೆಲ್ಲುವ ಸಾಧ್ಯತೆಯಿದ್ದರೆ, ಬಿಜೆಪಿ 130 – 150 ಸೀಟುಗಳನ್ನು ಪಡೆಯುವ ನಿರೀಕ್ಷೆಯಿದೆ. ಇತರರು 8-16 ಸ್ಥಾನಗಳಿಗೆ ತೃಪ್ತಿಪಡಬಹುದು.

ಚಾಣಕ್ಯ ಸ್ಟ್ರಾಟಜೀಸ್ ಸಂಸ್ಥೆಯ ಪ್ರಕಾರ, ಟಿಎಂಸಿ 155 – 165 ಸ್ಥಾನ ಪಡೆದು ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುವ ಸಾಧ್ಯತೆವಿದ್ದು, ಬಿಜೆಪಿ 110-115 ಸ್ಥಾನಗಳಿಗೆ ಸೀಮಿತವಾಗಬಹುದು ಮತ್ತು ಇತರರು 9-14 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಸಲಿ ಫಲಿತಾಂಶದ ವೇಳೆ ರೋಚಕ ಫಲಿತಾಂಶ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !