May 26, 2026
Tuesday, May 26, 2026
spot_img

ಅಮೆರಿಕ ಜತೆ ಸಂಧಾನಕ್ಕೆ ಇರಾನ್ ಹೊಸ ಹೆಜ್ಜೆ: ‘ಪಾಕಿಗೆ’ ಪ್ರಸ್ತಾವನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ಹೊಸ ಪ್ರಯತ್ನ ಆರಂಭಿಸಿದೆ.

ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಹೊಸ ಪ್ರಸ್ತಾವನೆಯನ್ನು ಕಳುಹಿಸಿರುವುದಾಗಿ ವರದಿಯಾಗಿದ್ದು, ಇದು ಯುದ್ಧಭೀತಿಯ ನಡುವೆ ರಾಜತಾಂತ್ರಿಕ ಪರಿಹಾರದ ಸಾಧ್ಯತೆಯನ್ನು ಮತ್ತೆ ಚರ್ಚೆಗೆ ತಂದಿದೆ.

ಇದನ್ನೂ ಓದಿ:

ಇತ್ತೀಚಿನ ಬೆಳವಣಿಗೆಗಳಿಂದ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಕಾಣಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಉದ್ವಿಗ್ನತೆಯಿಂದ ತೈಲ ಮತ್ತು ಅನಿಲ ಪೂರೈಕೆಗೆ ಅಡ್ಡಿಯಾಗಿದ್ದು, ಬೆಲೆ ಏರಿಕೆ ಆತಂಕ ಹೆಚ್ಚಿಸಿದೆ. ಜಾಗತಿಕ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಭೀತಿ ಎದುರಾಗಿದೆ.

ಇದರ ನಡುವೆಯೇ, ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸಿಕೊಂಡಿದ್ದು, ಯಾವುದೇ ದಾಳಿ ನಡೆದರೆ ತೀವ್ರ ಪ್ರತಿಕ್ರಿಯೆ ನೀಡುವ ಸೂಚನೆ ನೀಡಿದೆ ಎನ್ನಲಾಗಿದೆ. ಮತ್ತೊಂದೆಡೆ, ಅಮೆರಿಕ ತನ್ನ ಮುಂದಿನ ನಿಲುವನ್ನು ಬಹಿರಂಗಪಡಿಸಿಲ್ಲ.

ಈ ಹೊಸ ಪ್ರಸ್ತಾವನೆ ಉದ್ವಿಗ್ನತೆಯನ್ನು ತಗ್ಗಿಸಿ ಮಾತುಕತೆಗೆ ದಾರಿ ಮಾಡಿಕೊಡುತ್ತದೆಯೇ ಎಂಬುದರತ್ತ ಈಗ ಜಗತ್ತಿನ ಗಮನ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !