ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮುಗಿದ ಬೆನ್ನಲ್ಲೇ, ಅರಮನೆ ಆವರಣದಲ್ಲಿ ಬಿದ್ದಿದ್ದ ಕಸವನ್ನು ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಅವರು ಸ್ವತಃ ತಾವೇ ಎತ್ತಿ ಸ್ವಚ್ಛಗೊಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪ್ರವಾಸಿಗರ ಬೇಜವಾಬ್ದಾರಿ
ವಿಶ್ವವಿಖ್ಯಾತ ಮೈಸೂರು ದಸರಾದ ವಿಜಯದಶಮಿ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಅರಮನೆ ಆವರಣಕ್ಕೆ ಆಗಮಿಸಿದ್ದರು. ಆದರೆ, ಜಂಬೂಸವಾರಿ ಮುಗಿದ ನಂತರ ಪ್ರವಾಸಿಗರ ಬೇಜವಾಬ್ದಾರಿಯಿಂದಾಗಿ ಇಡೀ ಅರಮನೆ ಅಂಗಳವೆಲ್ಲಾ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ-ತಿನಿಸುಗಳ ಖಾಲಿ ಪ್ಯಾಕೆಟ್ಗಳು ಹಾಗೂ ಕಸದ ರಾಶಿಯಿಂದ ತುಂಬಿಹೋಗಿತ್ತು. ಐತಿಹಾಸಿಕ ಅರಮನೆಯ ಸೌಂದರ್ಯಕ್ಕೆ ಧಕ್ಕೆ ತಂದ ಈ ದೃಶ್ಯ ಪ್ರಜ್ಞಾವಂತ ನಾಗರಿಕರಲ್ಲಿ ಬೇಸರ ಮೂಡಿಸಿತ್ತು.
https://www.instagram.com/reel/DeyjbRhsq0s/?dlrf=bWdhM3dxZ3JtemMz
ರಿಯಲ್ ಲೈಫ್ ಹೀರೋ ಆದ ವಸಿಷ್ಠ ಸಿಂಹ
ಈ ಪರಿಸ್ಥಿತಿಯನ್ನು ಗಮನಿಸಿದ ನಟ ವಸಿಷ್ಠ ಸಿಂಹ ಅವರು ಕೇವಲ ಮಾತಿನಲ್ಲಿ ಜಾಗೃತಿ ಮೂಡಿಸದೇ, ತಾವೇ ಖುದ್ದಾಗಿ ಅಂಗಳಕ್ಕಿಳಿದು ಕಸ ಆರಿಸಲು ಆರಂಭಿಸಿದರು. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಅವರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ನೀರಿನ ಬಾಟಲಿಗಳನ್ನು ಕೈಯಾರೆ ಎತ್ತಿ ಕಸದ ಬುಟ್ಟಿಗೆ ಹಾಕಿದರು.
ಇದನ್ನೂ ಓದಿ:
ಸಾರ್ವಜನಿಕರ ಸಾಥ್
ನಟನ ಸರಳತೆ ಮತ್ತು ಪರಿಸರ ಕಾಳಜಿಯನ್ನು ಕಂಡು ಆಶ್ಚರ್ಯಚಕಿತರಾದ ಅಲ್ಲಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರು ಕೂಡ ಅವರೊಂದಿಗೆ ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. “ಸ್ವಚ್ಛತೆ ಎಂಬುದು ಕೇವಲ ಸರ್ಕಾರದ ಕೆಲಸವಲ್ಲ, ನಮ್ಮೆಲ್ಲರ ಕರ್ತವ್ಯ” ಎಂಬ ಬಲವಾದ ಸಂದೇಶವನ್ನು ವಸಿಷ್ಠ ಸಿಂಹ ಅವರು ತಮ್ಮ ಕಾರ್ಯದ ಮೂಲಕ ಸಾರಿದ್ದಾರೆ. ರೀಲ್ಸ್ನಲ್ಲಿ ಮಾತ್ರವಲ್ಲದೇ ರಿಯಲ್ ಜೀವನದಲ್ಲೂ ಹೀರೋ ಎನಿಸಿಕೊಂಡ ಇವರ ಈ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.



