August 15, 2026
Saturday, August 15, 2026
spot_img

ಬೆಣ್ಣೆಯ ರುಚಿಯಲ್ಲಿ ಮಿಂದೇಳುವ ಇರಾನಿ ಬನ್ ಮಸ್ಕಾ: ಸಂಜೆಯ ಚಹಾಕ್ಕೆ ಬೆಸ್ಟ್ ಕಾಂಬೊ

ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರುಚಿಕರ ಖಾದ್ಯವೇ ಇರಾನಿ ಕೆಫೆ ಸ್ಟೈಲ್ ಬನ್ ಮಸ್ಕಾ. ಮೃದುವಾದ ಬನ್‌ಗೆ ಬೆಣ್ಣೆಯ ಸವಿಯನ್ನು ಸೇರಿಸಿ ಬಿಸಿ ಬಿಸಿ ಚಹಾದೊಂದಿಗೆ ಸವಿದರೆ ಅದರ ರುಚಿಯೇ ವಿಭಿನ್ನ.

ಬೇಕಾಗುವ ಸಾಮಗ್ರಿಗಳು

ಸಿಹಿ ಬನ್ – 2
ಉಪ್ಪಿಲ್ಲದ ಬೆಣ್ಣೆ – 4 ಟೇಬಲ್ ಸ್ಪೂನ್
ಹಾಲಿನ ಪುಡಿ – 2 ಟೇಬಲ್ ಸ್ಪೂನ್
ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆ ಪುಡಿ – 1 ರಿಂದ 2 ಟೇಬಲ್ ಸ್ಪೂನ್

ಮಾಡುವ ವಿಧಾನ

ತಾಜಾ ಮತ್ತು ಮೃದುವಾದ ಬನ್ ಅನ್ನು ಮಧ್ಯದಲ್ಲಿ ಅಡ್ಡವಾಗಿ ಕತ್ತರಿಸಿ. ಆದರೆ ಎರಡೂ ಭಾಗಗಳು ಸಂಪೂರ್ಣವಾಗಿ ಬೇರ್ಪಡದಂತೆ ನೋಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ಬೆಣ್ಣೆ ತೆಗೆದು ಅದಕ್ಕೆ ಹಾಲಿನ ಪುಡಿ ಮತ್ತು ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆ ಪುಡಿಯನ್ನು ಸೇರಿಸಿ. ಮಿಶ್ರಣವು ನಯವಾಗಿ, ಕೆನೆ ಹದಕ್ಕೆ ಬರುವವರೆಗೆ ಚೆನ್ನಾಗಿ ಕಲೆಸಿ.

ತಯಾರಿಸಿದ ಮಸ್ಕಾವನ್ನು ಬನ್‌ನ ಒಳಭಾಗಕ್ಕೆ ಸವರಿ. ಹೆಚ್ಚು ಬೆಣ್ಣೆ ಸವರಿದಷ್ಟೂ ರುಚಿ ಹೆಚ್ಚಾಗುತ್ತದೆ.

ಬನ್ ಅನ್ನು ಮುಚ್ಚಿ ಬಿಸಿ ಬಿಸಿ ಇರಾನಿ ಚಹಾ ಅಥವಾ ಕಟಿಂಗ್ ಚಹಾದೊಂದಿಗೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !