ಇರಾಕ್ ಮಿಲಿಟರಿಯ ವೈಮಾನಿಕ ದಾಳಿ: ಐವರು IS ಉಗ್ರರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಇರಾಕ್ ನ ಕಿರ್ಕುಕ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐವರು ಇಸ್ಲಾಮಿಕ್ ಸ್ಟೇಟ್ (IS) ಉಗ್ರರು ಹತ್ಯೆಯಾಗಿದ್ದಾರೆ ಎಂದು ಇರಾಕ್ ಮಿಲಿಟರಿ ಶನಿವಾರ ತಿಳಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ಇರಾಕ್ ಪಡೆಗಳು ಶುಕ್ರವಾರ ಕಿರ್ಕುಕ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿರುವ ಹ್ಯಾಮ್ರಿನ್ ಪರ್ವತ ಶ್ರೇಣಿಯಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ಇರಾಕ್ ನ ಜಂಟಿ ಕಾರ್ಯಾಚರಣೆ ಕಮಾಂಡ್ ನ ಮಾಧ್ಯಮ ಘಟಕ ಹೇಳಿರುವುದಾಗಿ Xinhua ಸುದ್ದಿಸಂಸ್ಥೆ ವರದಿ ಮಾಡಿದೆ.

ಇರಾಕ್ ಸೇನೆ ಮತ್ತು ಗುಪ್ತಚರ ದಳದ ಜಂಟಿ ಪಡೆ ಎರಡು ಅಡಗುತಾಣಗಳನ್ನು ಶೋಧಿಸಿದ್ದು, ಐವರು ಉಗ್ರರ ಶವಗಳನ್ನು ಪತ್ತೆ ಮಾಡಿದೆ. ಅಡಗುತಾಣಗಳಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಲಾಜಿಸ್ಟಿಕಲ್ ವಸ್ತುಗಳು ಮತ್ತು ಸಂವಹನ ಸಾಧನಗಳನ್ನು ಸಹ ಪತ್ತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!